ಇಬ್ಬರು ಸ್ವಾಮೀಜಿಗಳ ವಿರುದ್ಧ ಎಚ್​.ಡಿ.ಕುಮಾರಸ್ವಾಮಿ ಸಿಡಿಮಿಡಿ!

HDK
Published on

ಬೆಂಗಳೂರು: ‘ಅದೇಕೋ ಸ್ವಾಮೀಜಿಗಳು ಯಡಿಯೂರಪ್ಪನವರೇ ಬೇಕು ಎನ್ನುತ್ತಿದ್ದಾರೆ. ಜನರಿಗೆ ಅದೇನು ಒಳ್ಳೆಯದು ಮಾಡಿದ್ದಾರೋ ಗೊತ್ತಿಲ್ಲ’ ಎಂದು ಇಬ್ಬರು ಶ್ರೀಗಳ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಕೈಯಲ್ಲಿ ಅಲ್ಲ, ಜೆಸಿಬಿಯಲ್ಲಿ ಸರ್ಕಾರದ ಖಜಾನೆ ಬಾಚುತ್ತಿದ್ದಾರೆ. ಆದರೂ ಸ್ವಾಮೀಜಿಗಳು ಮಾತ್ರ ಅವರೇ ಬೇಕು ಎನ್ನುತ್ತಿದ್ದಾರೆ. ಅದೇಕೋ ಗೊತ್ತಿಲ್ಲ ಎಂದು ಕೆಂಪೇಗೌಡ ಜಯಂತಿ ದಿನದಂದು ಯಡಿಯೂರಪ್ಪ ಸರ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಶ್ರೀಗಳ ವಿರುದ್ಧ ಜೆಡಿಎಸ್​ ಪ್ರಧಾನ ಕಚೇರಿಯಲ್ಲಿ ಗುರುವಾರ ವಾಗ್ದಾಳಿ ನಡೆಸಿದರು.

ಪಂಚರತ್ನ ಅಲ್ಲ, ಪಂಚಾಕ್ಷರಿ: ನಾನು ಸಿಎಂ ಆದರೆ ಪಂಚರತ್ನ ಕಾರ್ಯಕ್ರಮಕ್ಕೆ ನಿರ್ಧರಿಸಿದ್ದೇನೆ. ಪಂಚರತ್ನ ಬದಲಿಗೆ ಪಂಚಾಕ್ಷರಿ ಎಂದು ಹೆಸರಿಟ್ಟಿದ್ದೇನೆ. ವೀರಶೈವ ಸಮಾಜ ಅತ್ಯಂತ ಗೌರವ ಕೊಡುವ ಪಂಚಾಕ್ಷರಿ ಕಾರ್ಯಕ್ರಮ ಕೊಡುತ್ತೇನೆ. 120 ಸ್ಥಾನ ಬಂದರೆ ಆರೋಗ್ಯ, ರೈತ, ವಸತಿ, ಶಿಕ್ಷಣ ಮತ್ತು ಉದ್ಯೋಗ ಕಾರ್ಯಕ್ರಮ ಕೊಡುತ್ತೇನೆ. ಕೋವಿಡ್ ಅಲ್ಲ, ಅದರಪ್ಪನಂತಹ ರೋಗ ಬರಲಿ ಸಾವು ಬರದೆ ಇರುವ ಹಾಗೆ ಆರೋಗ್ಯ ಕ್ಷೇತ್ರಕ್ಕೆ ಕಾರ್ಯಕ್ರಮ ಕೊಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net