ಕುಮಾರಸ್ವಾಮಿಗೆ ಸಂಜೆವರೆಗೆ ಫುಲ್‌ ಫ್ರೀಡಂ ಇದೆ, ಅವರು ಹೇಳಿದ್ದೆಲ್ಲವನ್ನೂ ಕೇಳ್ತೀವಿ...

hdk tt
Published on

ವಿಜಯಪುರ: ಎಚ್.ಡಿ. ಕುಮಾರಸ್ವಾಮಿ ಬಗ್ಗೆ ಹೆಚ್ಚಾಗಿ ಮಾತನಾಡಲ್ಲ. ಇಂದು ಸಂಜೆವರೆಗೆ ಅವರಿಗೆ ಫುಲ್ ಫ್ರೀಡಂ ಇದೆ. ಅವರು ಏನೇನು ಹೇಳ್ತಾರೋ ಕೇಳಿಕೊಂಡು ಇರುತ್ತೇವೆ ಎಂದು ಸಚಿವ ವಿ. ಸೋಮಣ್ಣ ಪ್ರತಿಕ್ರಿಯಿಸಿದರು.

ನಾನೂ 40 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದೇನೆ. ಈ ಹಿಂದೆ ನಾನು ಕೂಡ ಅವರ ತಂದೆ ಗರಡಿಯಲ್ಲಿ ಬೆಳೆದವನು. ಜಮೀರ ಅಹ್ಮದ್ ಅವರನ್ನು ಕೀಳು ಪದಗಳಿಂದ ಸಂಬೋಧಿಸಿದ್ದು, ಕುಮಾರಸ್ವಾಮಿ ಅವರ ವ್ಯಕ್ತಿತ್ವ ಹಾಗೂ ಅವರ ನಡವಳಿಕೆ, ಸಂಸ್ಕಾರ ತಿಳಿಸುತ್ತದೆ. ಇನ್ನೂ ಚಿಕ್ಕ ವಯಸ್ಸು ಅವರು ಹಾಗೆಲ್ಲ ಮಾತನಾಡಬಾರದು ಎಂದು ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಬಿಜೆಪಿ ಕೇವಲ ಹಿಂದುಪರ ಅಲ್ಲ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಸಿಂದಗಿಗೆ ಬಂದು ನೋಡಿ ಎಷ್ಟು ಮುಸ್ಲಿಂ ಬಾಂಧವರು ಬಿಜೆಪಿ ಪ್ರಚಾರದಲ್ಲಿ ಇರುತ್ತಾರೆ. ಅದೆಲ್ಲ ಹೋಗಿದೆ. ನರೇಂದ್ರ ಮೋದಿ ಕಾರ್ಯಕ್ರಮಗಳು ಸಾಮಾನ್ಯ ಜನರನ್ನು ತಲುಪುತ್ತಿವೆ. ಸಾಮಾನ್ಯ ರೈತನ ಖಾತೆಗೆ ಹಣ ಹೋಗುವಂತೆ ಮಾಡಿದ್ದು ಮೋದಿ ಎಂದರು.

ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ 2 ತಿಂಗಳಾಗಿದೆ. ಇನ್ನೂ ಸಾಕಷ್ಟು ಅಭಿವೃದ್ಧಿ ಆಗಬೇಕಿದೆ. ಸಿಂದಗಿ ಮತ್ತು ಹಾನಗಲ್ಲನಲ್ಲಿ ಬಿಜೆಪಿ ಗೆಲ್ಲಲಿದೆ. ಹಾನಗಲ್ಲನ ಜನತೆ ಪ್ರಜ್ಞಾವಂತರಿದ್ದಾರೆ. ಯಾರಿಗೆ ಮತ ಹಾಕಬೇಕೆಂಬುದು ಗೊತ್ತಿದೆ. ಹೀಗಾಗಿ ಸಿಂದಗಿಗಿಂತಲೂ ಹೆಚ್ಚಿನ ಮತಗಳ ಅಂತರದಿಂದ ಹಾನಗಲ್ಲ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net