

ರಾಮನಗರ: ರಾಜಕೀಯ ಬದ್ಧ ವೈರಿಗಳಾದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್ ಮತ್ತು ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಮೂವರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಲ್ಲದೆ, ವೇದಿಕೆ ತೆರಳುವ ಮುನ್ನ ವೇದಿಕೆ ಮುಂಭಾಗ ಅಕ್ಕಪಕ್ಕದಲ್ಲೇ ಕೆಲ ಸಮಯ ಕುಳಿತು ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದರು.
ಚನ್ನಪಟ್ಟಣದ ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕವಿ ಡಾ.ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮದ ವೇದಿಕೆಯಲ್ಲಿ ಮೂರು ರಾಜಕೀಯ ಪಕ್ಷಗಳ ನಾಯಕರು ಕಾಣಿಸಿಕೊಂಡರು.
ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಸುರೇಶ್, ವೇದಿಕೆಯಲ್ಲಿ ಸ್ವಾಮೀಜಿಗಳು ಸಿಪಿವೈ ಸಚಿವರಾಗುತ್ತಾರೆ ಎಂದು ಹೇಳಿದ್ರು. ಹಾಗಾಗಿ ಯೋಗೇಶ್ವರ್ಗೆ ನಾನು ಒಳ್ಳೆಯದಾಗಲಿ ಅಂದೆ. ಯೋಗೀಶ್ವರ್ ಕಂಡ್ರೆ ಭಯ ಅಲ್ವಾ? ಎಲ್ಲಿ ಏನ್ ಬಿಟ್ಟು ಬಿಡ್ತಾರೋ... ವ್ಯಂಗ್ಯವಾಡಿದರು.