'ಭೂತ ಬಂತು ಭೂತ' ಎಂದು ಹೆದರಿಸುವ ಆಟ ಬಿಟ್ಟು ಸಾಕ್ಷಿ ಕೊಡಿ: ಪ್ರತಿಪಕ್ಷಕ್ಕೆ ಗೋವಿಂದ ಕಾರಜೋಳ ತರಾಟೆ

govinda karajola
Published on

ಬೆಂಗಳೂರು: ಪ್ರತಿಪಕ್ಷಗಳು 'ಬಿಟ್​ಕಾಯಿನ್​ ಸ್ಕ್ಯಾಮ್' ಎಂದು ಬೊಬ್ಬೆ ಹಾಕುತ್ತಿರುವುದು 'ಭೂತ ಬಂತು ಭೂತ' ಎಂದು ಮಕ್ಕಳನ್ನು ಹೆದರಿಸುವ ಆಟಿಕೆಯಂತಿದೆ ಎಂದು ಸಚಿವ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ.

ಬಿಟ್​ಕಾಯಿನ್​ ಎಂಬುದು ಸ್ಕ್ಯಾಮ್ ಅಲ್ಲ. ಇದು ಬಿಟ್​ಕಾಯಿನ್ ಒಳಗೊಂಡ ಹಗರಣ, ಸೈಬರ್ ಕ್ರೈಂ. ಶ್ರೀಕಿ ಒಬ್ಬ ಹ್ಯಾಕರ್. ಸರ್ಕಾರಿ ಸೈಟ್ ಅನ್ನು ಹ್ಯಾಕ್ ಮಾಡಿಕೊಂಡಿರುವುದಾಗಿ ಆತನೇ ಹೇಳಿಕೊಂಡಿದ್ದಾನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಈ ವಿಚಾರದಲ್ಲಿ ಮುಕ್ತ ಮನಸ್ಸು ಹೊಂದಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.

ಬಿಟ್​ಕಾಯಿನ್ ಒಳಗೊಂಡ ಹಗರಣದ ಬಗ್ಗೆ ಪ್ರತಿಪಕ್ಷಗಳ ಬಳಿ ಪುರಾವೆಗಳು ಇದ್ದರೆ ತನಿಖಾ ಸಂಸ್ಥೆಗಳಿಗೆ ನೀಡಲಿ. ಅದನ್ನು ಬಿಟ್ಟು ಸುಮ್ಮನೆ ಬಿಟ್​ಕಾಯಿನ್​ ಸ್ಕ್ಯಾಮ್ ಅಂದರೆ ಯಾರಿಗೂ ಅಂಜಿಕೆಯಿಲ್ಲ. ಏಕೆಂದರೆ ನಾವು ಇದನ್ನಾಗಲೇ ತನಿಖಾ ಸಂಸ್ಥೆಗಳಿಗೆ ವರ್ಗಾಯಿಸಿದ್ದೇವೆ. ನಮ್ಮಲ್ಲಿ ಮುಚ್ಚಿಡುವುದು ಏನೂ ಇಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net