ಶಾರೂಕ್​​ ಖಾನ್​​-ಅಜಯ್​ ದೇವಗನ್​ಗೆ 5 ರೂ. ಮನಿಆರ್ಡರ್​​ ಕಳುಹಿಸಿದ ವಿದ್ಯಾರ್ಥಿನಿ: ಕಾರಣವೇನು ಗೊತ್ತಾ?

Sharuk Khan
Published on

ಭೋಪಾಲ್​​: ಇತ್ತೀಚೆಗೆ ಪಾನ್​ ಮಸಾಲ ತಂಬಾಕು ಜಾಹಿರಾತಿನಲ್ಲಿ ಕಾಣಿಸಿಕೊಂಡು ಭಾರೀ ಸುದ್ದಿಯಾಗಿದ್ದ ಬೆನ್ನಲ್ಲೇ ಬಾಲಿವುಡ್​ ನಟ ಅಕ್ಷಯ್​ ಕುಮಾರ್ ಈ​ ಜಾಹಿರಾತಿನಿಂದ ಹಿಂದೆ ಸರಿದಿದ್ದರು.

ಆದರೆ.. ಇದಕ್ಕೆ ತಲೆಕೆಡಿಸಿಕೊಳ್ಳದೇ ತಮಗೆ ಹಣವೇ ಮುಖ್ಯ ಎಂದು ಮತ್ತೊಮ್ಮೆ ಸಾಬೀತುಪಡಿಸಿ ತಂಬಾಕು ಜಾಹಿರಾತಿನಲ್ಲಿ ಕಾಣಿಸಿಕೊಂಡ ಬಾಲಿವುಡ್​​ ನಟರಾದ ಶಾರೂಕ್​​ ಖಾನ್​ ಹಾಗೂ ಅಜಯ್​ ದೇವಗನ್​ ಅವರಿಗೆ ವಿದ್ಯಾರ್ಥಿನಿಯೊಬ್ಬಳು ಛೀ ಮಾರಿ ಹಾಕಿದ್ದಾಳೆ.

ಮಧ್ಯಪ್ರದೇಶದ ಖರಗೋನ್ ಜಿಲ್ಲೆಯವಳಾದ ಈಕೆ ಬಿಎ ವ್ಯಾಸಂಗ ಮಾಡುತ್ತಿದ್ದು, ಸ್ಟಾರ್​ ನಟರನ್ನು ಈಗ ತರಾಟೆಗೆ ತೆಗೆದುಕೊಂಡಿದ್ದಾಳೆ

ಇದಕ್ಕೆ ಕಾರಣ.. ಖ್ಯಾತ ನಟರಿಬ್ಬರು ಆಕ್ಷೇಪದ ನಡುವೆಯೂ ತಂಬಾಕು ಜಾಹಿರಾತಿನಲ್ಲಿ ಕಾಣಿಸಿಕೊಂಡು ಯುವ ಜನತೆ ಮೇಲೆ ಪರಿಣಾಮ ಬೀರುವಂತೆ ಮಾಡಿದ್ದಾರೆ ಎಂದು ಈ ಬಾಲಕಿ ಆರೋಪಿಸಿದ್ದಾಳೆ. ಇದಕ್ಕಾಗಿ ಕೋಪಗೊಂಡು ಈ ಇಬ್ಬರು ನಟರ ಮನೆ ವಿಳಾಸಕ್ಕೆ 5 ರೂ. ಮನಿಆರ್ಡರ್​ ಮಾಡಿದ್ದಾಳೆ.

ಶಾರೂಕ್​ ಖಾನ್​ ಮತ್ತು ಅಜಯ್​ ದೇವಗನ್​ ಅವರನ್ನು ನಾನು ಸಹೋದರನಂತೆ ಭಾವಿಸುತ್ತೇನೆ. ಹಾಗಾಗಿ ಇಬ್ಬರು ನನ್ನ ಮನವಿಯನ್ನು ಪುರಸ್ಕರಿಸಲೇಬೇಕು. ದಯವಿಟ್ಟು ಪಾನ್​ ಮಸಾಲಾ ಜಾಹಿರಾತನ್ನು ಹಿಂಪಡೆದು ಯುವಜನತೆಯನ್ನು ರಕ್ಷಿಸಬೇಕೆಂದು ಕೇಳಿಕೊಂಡಿದ್ದಾಳೆ.

ನಾನು ನಿಮ್ಮಿಬ್ಬರ ಅಭಿಮಾನಿ ನಾನೂ ಕೂಡ ಪಾನ್ ಮಸಾಲಾ ತಿನ್ನಲು ಆರಂಭಿಸುತ್ತೇನೆ ಎಂದು ಈ ಇಬ್ಬರು ನಟರ ವಿರುದ್ಧ ಅಸಮಾಧಾನ ಹೊರಹಾಕಿದ್ದಾಳೆ. ಒಟ್ಟಾರೆ ಪಾನ್​ ಮಸಾಲಾ ಜಾಹಿರಾತಿನ ವಿರೋಧದ ನಡುವೆಯೂ ಈ ನಟರು ಮುಂದುವರಿಸಿದ್ದು, ಈಗ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net