More

    ಬಾಲಿವುಡ್​​ v/s ದಕ್ಷಿಣ ಭಾರತ ಸಿನಿಮಾ ಬಗ್ಗೆ ಕೆಜಿಎಫ್​​-2 ನಟಿ ಹೇಳಿದ್ದು ಹೀಗೆ

    ಮುಂಬೈ: ದಕ್ಷಿಣ ಭಾರತದ ಸಿನಿಮಾಗಳ ಗೆಲುವು ಹಾಗೂ ಬಾಲಿವುಡ್​ ಸರಣಿ ಸೋಲಿನ ಕುರಿತು ಇತ್ತೀಚೆಗೆ ಚರ್ಚೆ ಶುರುವಾಗಿದೆ. ನಮ್ಮಲ್ಲಿ ಅಂತಹ ಪ್ರತಿಭಾನ್ವಿತ ನಿರ್ದೇಶಕರಿಲ್ಲ ಎಂದು ಸ್ಟಾರ್​ ನಟರೇ ಹೇಳಿಕೊಂಡಿದ್ದರೆ, ಮತ್ತೆ ಕೆಲವರು ಬಾಲಿವುಡ್​​​ ಎಂದಿಗೂ ಬಾಲಿವುಡ್​ ಎಂದೂ ಸಮರ್ಥಿಸಿಕೊಂಡವರೂ ಇದ್ದಾರೆ.

    ಈ ನಡುವೆ ಇತ್ತೀಚೆಗೆ ಅಕ್ಷಯ್​ ಕುಮಾರ್​ ಸಹ ದಕ್ಷಿಣ ಭಾರತದ ಹಿಟ್​ ಸಿನಿಮಾಗಳನ್ನು ನಾವು ರೀಮೇಕ್​ ಮಾಡುವುದರಲ್ಲಿ ತಪ್ಪೇನಿದೆ, ಅದರಲ್ಲೂ ಬಾಲಿವುಡ್​ ಹಾಗೂ ದಕ್ಷಿಣ ಭಾರತ ಎಂದು ಇಬ್ಭಾಗಿಸಿದರೆ ನನಗೆ ಕೋಪ ಬರುತ್ತೆ ಎಂದು ಹೇಳಿದ್ದರು.ಇದೀಗ ಈ ಬಗ್ಗೆ ಹೇಳಿಕೆ ನೀಡಿರುವ ನಟಿ ರವೀನಾ ಟಂಡನ್​ ಬಾಲಿವುಡ್​ ಹಾಗೂ ದಕ್ಷಿಣ ಭಾರತ ಸಿನಿಮಾಗಳು ಎಂದೇನಿಲ್ಲ. ಎಲ್ಲವೂ ನಮ್ಮ ಸಿನಿಮಾಗಳೇ ಆಗಿವೆ ಇದರಲ್ಲಿ ಸ್ಪರ್ಧೆ ಏನೂ ಇಲ್ಲ ಎಂದು ಹೇಳಿದ್ದಾರೆ.

    ಕೆಜಿಎಫ್​​-2, ಆರ್​ಆರ್​​ಆರ್​ ಹಾಗೂ ಪುಷ್ಪ ಸಿನಿಮಾಗಳ ಗೆಲುವಿನ ಬಳಿಕ ಜನರು ಬಾಲಿವುಡ್​​​​ ಹಾಗೂ ದಕ್ಷಿಣ ಭಾರತದ ಸಿನಿಮಾ ಎಂದೇ ಚರ್ಚೆ ನಡೆಸುತ್ತಿದ್ದಾರೆ. ನನಗೆ ಆ ರೀತಿ ಅನ್ನಿಸುವುದಿಲ್ಲ, ಏಕೆಂದರೆ ನನಗೆ ಎಲ್ಲಾ ಭಾಷೆಯ ಸಿನಿಮಾಗಳು ಒಂದೇ ಆಗಿವೆ ಎಂದಿದ್ದಾರೆ.

    ರವೀನಾ ಟಂಡನ್​ ಕೆಜಿಎಫ್​-2 ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದು, ಈ ಹಿಂದೆಯೂ ಕನ್ನಡ ಸಿನಿಮಾದಲ್ಲಿ ರವೀನಾ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts