More

    27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಕ್ಸಲ್​ ಮುಖಂಡ ಸಿಕ್ಕಿದ್ದು ಶವವಾಗಿ: ಈತನ ಹಿನ್ನೆಲೆಯೇ ಭಯಾನಕ

    ಗಯಾ: ಮೂರು ದಶಕಗಳಿಂದ ತಲೆಮರೆಸಿಕೊಂಡಿದ್ದ, ಈವರೆಗೂ ಯಾರಿಗೂ ಸಿಗದ ನಕ್ಸಲ್​ ಮುಖಂಡನ ಶವ ಕೊನೆಗೂ ಪತ್ತೆಯಾಗಿದೆ. ಐದು ರಾಜ್ಯಗಳಿಗೆ ಬೇಕಿದ್ದ ಈತನ ಮುಖ ಈವರೆಗೂ ಯಾರೂ ನೋಡಿರಲಿಲ್ಲ.
    ಸಂದೀಪ್​ ಯಾದವ್​ ಮಾವೋವಾದಿ ಮುಖಂಡ, ಈತನ ಹೆಸರು ಕೇಳಿದರೇ 5 ಪೊಲೀಸರೇ ಬೆಚ್ಚಿ ಬೀಳುತ್ತಿದ್ದರು. ಅಂತಹ ಕ್ರೂರಿ ಈತ. ಐದು ರಾಜ್ಯಗಳ ಪೊಲೀಸರ ಈತನ ಹುಡುಕಾಟ ನಡೆಸಿದ್ದರೂ, ಈವರೆಗೂ ಇವರ ಫೋಟೋ ಕೂಡ ಸಿಕ್ಕಿರಲಿಲ್ಲ. ಇವನ ಸುಳಿವು ಪತ್ತೆ ಹಚ್ಚಲು ಪೊಲೀಸರ ಮಾಡಿದ ಯಾವುದೇ ತಂತ್ರವೂ ಈಡೇರಿರಲಿಲ್ಲ.

    ಇವನು ಸಾಮಾನ್ಯ ನಕ್ಸಲ್​ ಮುಖಂಡನಿಲ್ಲ, ಬಿಹಾರ, ಜಾರ್ಖಂಡ್​ನಲ್ಲಿ ಈತನ ಹೆಸರು ಹೇಳಿದರೇ ಸಾಕು ಜನರು ಬೆಚ್ಚಿ ಬೀಳುತ್ತಿದ್ದರೂ. ಈ ಭಾಗದ ನಡೆಯುವ ಯಾವುದೇ ಅಪರಾಧ ಕೃತ್ಯಗಳಿದ್ದರೂ ಅದು ಈತನ ಕೆಲಸವೇ ಆಗಿರುತ್ತಿದ್ದವು. ಹಾಗಾಗಿ ಇವನ ಬಗ್ಗೆ ಇಲ್ಲಿ ಯಾರೂ ಮಾತನಾಡುತ್ತಿರಲಿಲ್ಲ.

    ಆದರೆ… ಗುರುವಾರ ಅವನ ಶವ ಪತ್ತೆಯಾಗಿದೆ. ಈತನನ್ನು ದೊಡ್ಡ ಸಾಹೇಬಾ ಎಂದೇ ಕರೆಯಲಾಗುತ್ತಿತ್ತಂತೆ. ಅಂದಹಾಗೆ ಈತನದ್ದೇ ಶವ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.

    27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಕ್ಸಲ್​ ಮುಖಂಡ ಸಿಕ್ಕಿದ್ದು ಶವವಾಗಿ: ಈತನ ಹಿನ್ನೆಲೆಯೇ ಭಯಾನಕ

    ಸದ್ಯ ಈತನ ಸಾವಿನಿಂದ ನಕ್ಸಲರಿಗೆ ಭಾರೀ ನಷ್ಟವಾಗಿದ್ದು, ಮುಖಂಡನ ಸಾವಿನಿಂದ ನಕ್ಸಲರು ರೆಕ್ಕೆ ಮುರಿದ ಹಕ್ಕಿಯಂತಾಗಿದ್ದಾರೆ. ಈತನ ಸುಳಿವು ನೀಡಿದವರಿಗೆ ಬಿಹಾರ ಸರ್ಕಾರ 5 ಲಕ್ಷ ಹಾಗೂ ಜಾರ್ಖಂಡ್​ ಸರ್ಕಾರ 25 ಲಕ್ಷ ರೂ. ಬಹುಮಾನವನ್ನೂ ಘೋಷಿಸಿದ್ದರು. ಏನೇ ಮಾಡಿದರೂ ಈತನ ಸುಳಿವು ಪತ್ತೆಯಾಗಲೇ ಇಲ್ಲ. ಅವನನ್ನು ಹಿಡಿಯುವುದಾಗಿರಲಿ ಆತನ ಭಾವಚಿತ್ರವೂ ಸಹ ಪೊಲೀಸರು ಕಲೆ ಹಾಕಲು ಆಗಿರಲಿಲ್ಲ.

    ಈತನ ಸಾವಿಗೆ ಕಾರಣವೇನು ಎಂದು ತನಿಖೆ ಕೈಗೊಂಡಿರುವ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಈತನಿಗೆ ಆಹಾರದಲ್ಲಿ ವಿಷವುಣಿಸಿ ಸಾಯಿಸಲಾಗಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಆದರೆ ಈ ಕೆಲಸ ಅವರ ಗುಂಪಿನಿಂದಲೇ ಆಗಿರಬಹುದು ಎಂದೂ ಶಂಕಿಸಲಾಗಿದೆ.

    ಇನ್ನೂ ಈತನ ಪತ್ನಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದು, ಮಗಳು ಮತ್ತು ಅಳಿಯ ದಿಲ್ಲಿಯಲ್ಲಿ ವಾಸಿಸುತ್ತಿದ್ದಾರೆ. ಈತನಿಗೆ ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರು ಇದ್ದರು ಎನ್ನಲಾಗಿದೆ. ಕುಟುಂಬದ ಜತೆಯೂ ರಹಸ್ಯವಾಗಿ ಭೇಟಿ ಮಾಡುತ್ತಿದ್ದ, ಆದರೂ ಈತನನ್ನು ಹಿಡಿಯಲು ಪೊಲೀಸರಿಂದ ಸಾಧ್ಯವಾಗಿರಲಿಲ್ಲ.

    ಸದ್ಯ ದಿಲ್ಲಿಯ ಮೆಡಿಕಲ್​ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ವರದಿ ಬಳಿಕವೇ ಈತನ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    500ಕ್ಕೂ ಅಧಿಕ ಪ್ರಕರಣ, 80 ಲಕ್ಷ ರೂ. ಬಹುಮಾನ: ನಕ್ಸಲ್​ ಮುಖಂಡ ಸಂದೀಪ್​ ಯಾದವವ್​ ವಿರುದ್ಧ ಬರೋಬ್ಬರಿ 500 ಪ್ರಕರಣಗಳು ದಾಖಲಾಗಿದ್ದವು. ಈತನ ಪತ್ತೆಗಾಗಿ 80 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿತ್ತು. 2018ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ ಈತನಿಗೆ ಸೇರಿದ್ದ 50 ಲಕ್ಷ ಮೌಲ್ಯದ ಆಸ್ತಿಯನ್ನು ಸಹ ಜಪ್ತಿ ಮಾಡಿತ್ತು. (ಏಜೆನ್ಸೀಸ್​)

    ವಿಚ್ಛೇದನದ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಆಮೀರ್ ​​​​ಖಾನ್​-ಕಿರಣ್​ ರಾವ್​ ಬಗ್ಗೆ ಅಭಿಮಾನಿಗಳು ಹೇಳಿದ್ದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts