ಬೆಳ್ಳುಳ್ಳಿ ದರ ದಿಢೀರ್​ ಕುಸಿತ: ಮಾರುಕಟ್ಟೆಯಲ್ಲೇ ಕಣ್ಣೀರಿಟ್ಟ ರೈತ

New Project (34)
Published on

ಹಾವೇರಿ: ಬೆಳ್ಳುಳ್ಳಿ ದರದಲ್ಲಿ ದಿಢೀರ್​ ಕುಸಿತ ಕಂಡಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಣೆಬೆನ್ನೂರಿನ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಭಾನುವಾರ ಕುಸಿದಿದೆ. ಕೆಲ ದಿನಗಳ ಹಿಂದೆ 1 ಕ್ವಿಂಟಲ್​ ಬೆಳ್ಳುಳ್ಳಿ ದರ 4 ಸಾವಿರದಿಂದ 10 ಸಾವಿರ ರೂಪಾಯಿ ಇತ್ತು. ಭಾನುವಾರ 1 ಕ್ವಿಂಟಲ್​ ಬೆಳ್ಳುಳ್ಳಿ ಒಂದೂವರೆ ಸಾವಿರದಿಂದ 4 ಸಾವಿರ ರೂಪಾಯಿಗೆ ಮಾರಾಟ ಆಗಿದ್ದು, ರೈತರು ನಷ್ಟ ಅನುಭವಿಸಿದ್ದಾರೆ.

ಧಾರಾಕಾರವಾಗಿ ಸುರಿದ ಮಳೆ, ಮೋಡಮುಸುಕಿದ ವಾತಾವರಣ ಇರುವ ಕಾರಣ ಬೆಳ್ಳುಳ್ಳಿಯನ್ನು ಒಣಗಿಸಲು ಆಗುತ್ತಿಲ್ಲ. ಪರಿಣಾಮ ಮನೆಯಲ್ಲಿ ದಾಸ್ತಾನು ಇಟ್ಟಿದ್ದ ಬೆಳ್ಳುಳ್ಳಿಯನ್ನೂ ರೈತರು ಮಾರಾಟಕ್ಕೆ ತಂದಿದ್ದರು. ಮಾರುಕಟ್ಟೆಗೆ ಭರಪೂರ ಬೆಳ್ಳುಳ್ಳಿ ಬಂದಿದ್ದರೂ ಖರೀದಿದಾರರ ಸಂಖ್ಯೆ ಮಾತ್ರ ಕಡಿಮೆ ಇತ್ತು. ಉತ್ತಮ ದರ ಸಿಗುತ್ತೆ ಎಂದು ಮಾರುಕಟ್ಟೆಗೆ ಬೆಳ್ಳುಳ್ಳಿ ತಂದಿದ್ದ ರೈತರು ದರ ನೋಡಿ ಕಂಗಾಲಾದರು. ಖರ್ಚು-ವೆಚ್ಚವೂ ಬರಲಿಲ್ಲ ಎಂದು ಕಣ್ಣೀರಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net