ಒಂದೇ ಆಸ್ಪತ್ರೆಯಲ್ಲಿ ಬೆಳಗ್ಗೆ ತಂದೆ, ಸಂಜೆ ಮಗ ಸಾವು! 20 ದಿನದ ಹಿಂದೆಯೇ ತಾಯಿ ಮರಣ

death
Published on

ಕಲಬುರಗಿ: ತಾಯಿ ಸತ್ತ 20 ದಿನಕ್ಕೆ ತಂದೆ-ಮಗ ಇಬ್ಬರೂ ಮೃತಪಟ್ಟ ಕರುಣಾಜಕ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

ಕರೊನಾ ಸೋಂಕಿಗೆ 20 ದಿನದ ಹಿಂದೆ ತಾಯಿ ಬಲಿಯಾಗಿದ್ದರು. ಇವರ ಪತಿ ಶ್ರೀಪತಿರಾವ ಬಡಿಗೇರ್(66), ಮಗ ಮೌನೇಶ್ ಬಡಿಗೇರ್(42) ಅವರಿಗೂ ಕರೊನಾ ಸೋಂಕು ತಗುಲಿತ್ತು. ಇಬ್ಬರೂ ನಗರದ ಖಾಸಗಿ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದರು.

ತಂದೆ-ಮಗನೂ ಮೊನ್ನೆ (ಗುರುವಾರ) ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಗುರುವಾರ ಮುಂಜಾನೆ ಅಪ್ಪ ಮೃತಪಟ್ಟರೆ, ಅಂದು ಸಂಜೆ ಮಗ ಸತ್ತರು. ಮೃತರು ಕಲಬುರಗಿ ನಗರದ ಮಹದೇವ ನಗರದಲ್ಲಿ ವಾಸವಿದ್ದರು. ಮೌನೇಶ್ ಬಡಿಗೇರ್ ಮುಂಬೈನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net