

ಶಿವಮೊಗ್ಗ: ಭಜರಂಗ ದಳದ ಕಾರ್ಯಕರ್ತ ಹರ್ಷನ ಕೊಲೆ ಕೇಸ್ಗೆ ಸ್ಫೋಟಕ ತಿರುವು ಸಿಕ್ಕಿದೆ. ಹರ್ಷನ ಹತ್ಯೆಗೂ ಮುನ್ನ ಕೊನೇ ಕ್ಷಣದಲ್ಲಿ ನಡೆದ ಘಟನೆಯೊಂದು ಬಹಳಷ್ಟು ನಿಗೂಢ ಎನಿಸಿದೆ. ಹತ್ಯೆಗೂ ಮುನ್ನ ಹರ್ಷನ ಮೊಬೈಲ್ಗೆ ಹುಡುಗಿಯರಿಬ್ಬರು ಕರೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಭಾನುವಾರ(ಫೆ.20) ಹುಡುಗಿಯರಿಬ್ಬರು ಪದೇಪದೆ ಹರ್ಷನ ಮೊಬೈಲ್ಗೆ ಕರೆ ಮಾಡಿ, 'ನಾವು ನಿಮ್ಮ ಸ್ನೇಹಿತರು' ಎನ್ನುತ್ತಿದ್ದರು. ಈ ವೇಳೆ 'ನನ್ನಿಂದ ಏನಾಗಬೇಕು?' ಎಂದು ಹರ್ಷ ಕೇಳಿದ್ದಾನೆ. 'ಇವರು ಯಾರು?' ಎಂದು ಜತೆಯಲ್ಲಿದ್ದ ಸ್ನೇಹಿತರನ್ನೂ ಹರ್ಷ ಕೇಳಿದ್ದಾನೆ. ಇದಾದ ಬಳಿಕ ಸ್ನೇಹಿತರ ಹೋದ ಕೆಲವೇ ಕ್ಷಣಗಳಲ್ಲಿ ಹರ್ಷನ ಕೊಲೆ ನಡೆದಿತ್ತು ಎಂದು ಮೂಲಗಳು ತಿಳಿಸಿವೆ. ಹರ್ಷನ ಮೊಬೈಲ್ ನಾಪತ್ತೆಯಾಗಿದ್ದು, ಸಾಕಷ್ಟು ಅನುಮಾನ ಹುಟ್ಟುಹಾಕಿದೆ.
ಹರ್ಷನ ಮೊಬೈಲ್ ಎಲ್ಲಿದೆ? ಅನ್ನೊದು ಇನ್ನೂ ಗೊತ್ತಾಗಿಲ್ಲ. ಆರೋಪಿಗಳ ಬಳಿ ಇದೆಯೇ? ಹರ್ಷನ ಕೊಲೆಗೆ ಆರೋಪಿಗಳು ಹುಡುಗಿಯರನ್ನು ಬಳಸಿಕೊಂಡರೇ? ಸಹಾಯ ಕೇಳುವ ನೆಪದಲ್ಲಿ ಹರ್ಷನಿಗೆ ಕರೆ ಮಾಡಿ ಖೆಡ್ಡಾ ತೋಡಿದ್ರಾ? ನೀವ್ಯಾರು ಎಂದು ಕೇಳಿದರೂ ಆ ಹುಡುಗಿಯರೇಕೆ ಹರ್ಷನಿಗೆ ಮಾಹಿತಿ ಕೊಡಲಿಲ್ಲ? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಿವೆ. ತನಿಖೆ ಬಳಿಕವಷ್ಟೇ ಈ ಬಗ್ಗೆ ಸತ್ಯಾಸತ್ಯತೆ ತಿಳಿಯಲಿದೆ. (ದಿಗ್ವಿಜಯ ನ್ಯೂಸ್)