'ಶಿವಮೊಗ್ಗದ ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು ಹೋದ... ಹುಡುಗಿ ಜತೆ ಹೋದ... ಕೇಸ್ ಇಲ್ಲ'

shimoga harsha (2)
Published on

ಬೆಂಗಳೂರು: ಶಿವಮೊಗ್ಗದಲ್ಲಿ ಕೊಲೆಯಾದ ಭಜರಂಗದಳ ಕಾರ್ಯಕರ್ತ ಹರ್ಷನ ಮೇಲೆ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜತೆ ಹೋದ ಕೇಸ್ ಇಲ್ಲ ಎಂದ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ದೇಶದಲ್ಲಿ ಯಾರ ಹತ್ಯೆ ಆದ್ರೂ ಎಲ್ಲ ಪಕ್ಷ ಹೇಳೋದು ಒಂದೇ ಮಾತು. ಕಠಿಣ ಶಿಕ್ಷೆ ಆಗಬೇಕು ಅಂತ. ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಸಾವಿನ ಬಳಿಕವೂ ಎಲ್ಲ ಪಕ್ಷ ಹೇಳಿದ್ದೂ ಅದೇ ಮಾತು. ಹರ್ಷನ ದೇಹದ ಮೇಲಿದ್ದ 'ಓಂ' ಅನ್ನೋ ಗುರುತಿನ ಮೇಲೆ ಚುಚ್ಚಿ ಚುಚ್ಚಿ ಕೊಂದಿದ್ದಾರೆ. ಹರ್ಷನ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.

ಹರ್ಷನ ಜೀವನವನ್ನು ನಾನು ಹತ್ತಿರದಿಂದ ನೋಡಿದ್ದೆ. ಅವನ ಮೇಲೆ ಅನೇಕ ಕೇಸ್ ಇತ್ತು. ಆದರೆ, ಅದ್ಯಾವುದೂ ವೈಯಕ್ತಿಕ ಕೇಸ್ ಅಲ್ಲ. ಹರ್ಷನ ವಿರುದ್ಧ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜತೆ ಹೋದ ಕೇಸ್ ಇಲ್ಲ. ಗಣೇಶ ಮೂರ್ತಿ ಕೂರಿಸೋ ಬಗ್ಗೆ ಮಾತ್ರ ಕೇಸ್ ಇರೋದು. ಅವರ ತಾಯಿ ಆತನಿಗೆ ಮದುವೆ ಆಗು ಮಗನೇ ಅಂತಿದ್ರು. ಎಲ್ಲರೂ ಮದುವೆಯಾದ್ರೆ, ದೇಶಕ್ಕಾಗಿ ಕೆಲಸ ಮಾಡೋರು ಯಾರು ಅಂತಿದ್ದ ಹರ್ಷ. ಕೇಸರಿ ಶಾಲು ಅಲ್ಲಿಂದ, ಇಲ್ಲಿಂದ ತಂದ್ರು ಅನ್ನೋ ಮಾಹಿತಿ ಇರೋ ಕಾಂಗ್ರೆಸ್​ನವರಿಗೆ, ಹರ್ಷನ ಕೊಲೆ ಮಾಡೋ ಬಗ್ಗೆ ಮಾಹಿತಿ ಇರಲಿಲ್ವಾ? ಎಂದು ಭಾರತಿ ಶೆಟ್ಟಿ ಕಿಡಿಕಾರಿದ್ದಾರೆ. ಹರ್ಷನ ಸಾವಿಗೆ ನ್ಯಾಯ ಸಿಗಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net