ತಲೈವಿ ದತ್ತು ಮಗ ಸುಧಾಕರನ್​ಗೆ​ ಜೈಲಿಂದ ಬಿಡುಗಡೆ ಭಾಗ್ಯ

jayalalitha sudhakaran
Published on

ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರ ಸಾಕುಮಗ ವಿ.ಎನ್​.ಸುಧಾಕರನ್​ಗೆ ಇಂದು(ಶನಿವಾರ) ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ.

ಜಯಲಲಿತಾರ ಆಪ್ತೆ ಶಶಿಕಲಾಗೂ ಮೊದಲೇ ಬಿಡುಗಡೆಯಾಗಬೇಕಿದ್ದ ಸುಧಾಕರನ್​​, 10 ಕೋಟಿ ರೂಪಾಯಿ ದಂಡ ಕಟ್ಟದೆ ಹೆಚ್ಚುವರಿಯಾಗಿ 1 ವರ್ಷ ಜೈಲು ವಾಸ ಅನುಭವಿಸಿ ಇದೀಗ ಬಿಡುಗಡೆಯಾಗಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ 2017ರಲ್ಲಿ ಜೈಲು ಶಿಕ್ಷೆ ಹಾಗೂ ತಲಾ 10 ಕೋಟಿ ದಂಡ ಕಟ್ಟುವ ಶಿಕ್ಷೆಗೆ ಚಿನ್ನಮ್ಮ, ಇಳವರೆಸಿ, ಸುಧಾಕರನ್​ ಗುರಿಯಾಗಿದ್ದರು. ಕಳೆದ ವರ್ಷ ಜೈಲಿಂದ ಬಿಡುಗಡೆಯಾದ ಚಿನ್ನಮ್ಮ ಶಶಿಕಲಾ ಮತ್ತು ಇಳವರೆಸಿ ಇಬ್ಬರೂ ದಂಡದ ಹಣ ಪಾವತಿಸಿದ್ದರು.

ಆದರೆ, ಸುಧಾಕರನ್​ ಅವರ ದಂಡದ ಹಣ ಪಾವತಿ ಆಗಿರಲಿಲ್ಲ. ಅತ್ತ ಜೈಲಿಂದ ಬಿಡುಗಡೆಯಾದ ಬಳಿಕ ಚಿನ್ನಮ್ಮ, ಸುಧಾಕರನ್​ರನ್ನು ಭೇಟಿ ಮಾಡಿಲ್ಲ, ದೂರವಾಣಿ ಮೂಲಕ ಭರವಸೆ ತುಂಬಲಾದರೂ ಕರೆ ಮಾಡಿರಲಿಲ್ಲ. ಅತ್ತ ಸುಧಾಕರನ್​ರ ಕುಟುಂಬಸ್ಥರ ಭೇಟಿಯೂ ಇರಲಿಲ್ಲ ಎಂದು ಜೈಲಧಿಕಾರಿಗಳು ತಿಳಿಸಿದ್ದಾರೆ. ಇನ್ನು ಇಂದು ಬಿಡುಗಡೆಯಾದ ಸುಧಾಕರನ್​ರನ್ನು ಅಭಿಮಾನಿಗಳು ಹೂ ಮಾಲೆ ಹಾಕಿ ಸ್ವಾಗತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net