More

    ಗುತ್ತಿಗೆದಾರನಿಗೆ ತಾನೇ ಆಹ್ವಾನಿಸಿ ಮಂಚ ಹಂಚಿಕೊಂಡ ಲೇಡಿ! ಇವಳ ಹಿನ್ನೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಬೆಂಗಳೂರು: ಸಿವಿಲ್ ಗುತ್ತಿಗೆದಾರರೊಬ್ಬರನ್ನು ಮಂಚಕ್ಕೆ ಕರೆದ ಮಹಿಳೆ, ಆತನೊಂದಿಗೆ ಖಾಸಗಿ ಕ್ಷಣಗಳನ್ನೂ ಕಳೆದಿದ್ದಳು. ಇದಾದ ಮೇಲೆ ಗುತ್ತಿಗೆದಾರನ ಕೈಗೆ ಅಪರಿಚಿತರು ಪೆನ್​ಡ್ರೈವ್​ ಕೊಟ್ಟು ಹೋಗಿದ್ದರು. ಆಮೇಲೆ ಶುರುವಾಯ್ತು ಲೇಡಿ ವರಸೆ…

    ಏನಿದು ಸ್ಟೋರಿ?: ಗುತ್ತಿಗೆದಾರ, ಅನ್ನಪೂರ್ಣೆಶ್ವರಿನಗರದ ನಿವಾಸಿ ಲೋಹಿತ್ (38) ಎಂಬುವರು 3 ತಿಂಗಳ ಹಿಂದೆ ನಾಗರಬಾವಿಯ ನಮ್ಮೂರ ತಿಂಡಿ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ನಿಂತಿದ್ದಾಗ ಅವರ ಬಳಿ ಬಂದ ಇಬ್ಬರು ಯುವಕರು, ನಮ್ಮ ಬಳಿ ಇರುವ ಹರ್ಬಲ್ ಲೈಫ್ ಉತ್ಪನ್ನಗಳನ್ನು ತೆಗೆದುಕೊಂಡರೆ ನೀವು ಬೇಗ ಸಣ್ಣಗಾಗುತ್ತೀರಿ ಎಂದು ನಂಬಿಸಿದ್ದರು. ನಂತರ ವಿದ್ಯಾ ಎಂಬಾಕೆಯ ಮೊಬೈಲ್ ನಂಬರ್ ಕೊಟ್ಟು ನೀವು ಈ ನಂಬರ್​ಗೆ ಕರೆ ಮಾಡಿ ಮಾತನಾಡಿ ಎಂದಿದ್ದರು. ವಿದ್ಯಾಗೆ ಕರೆ ಮಾಡಿದ್ದ ಲೋಹಿತ್, ಹರ್ಬಲ್ ಲೈಫ್ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದು ಅದನ್ನು ಖರೀದಿಸಿದ್ದರು. ನಂತರ ಆಗಾಗ ಲೋಹಿತ್​ಗೆ ಕರೆ ಮಾಡುತ್ತಿದ್ದ ವಿದ್ಯಾ ಸಲುಗೆ ಬೆಳೆಸಿಕೊಂಡಿದ್ದಳು. ಇತ್ತೀಚೆಗೆ ಕನಕಪುರ ರಸ್ತೆಯಲ್ಲಿರುವ ರೆಸಾರ್ಟ್​ಗೆ ಹೋಗಿ ಇಬ್ಬರೂ ಆತ್ಮೀಯವಾಗಿ ಕಾಲ ಕಳೆದಿದ್ದರು. ಆ ವೇಳೆ ವಿದ್ಯಾ ಮಾದಕ ವಸ್ತು ಸೇವಿಸಿ ರೆಸಾರ್ಟ್ ಸಿಬ್ಬಂದಿ ಜತೆ ಜಗಳ ಮಾಡಿದ್ದಳು. ಆಕೆಯನ್ನು ಲೋಹಿತ್ ಸಮಾಧಾನಪಡಿಸಿದರೂ ಆಕೆ ಕೇಳದಿದ್ದಾಗ ವಿದ್ಯಾಳನ್ನು ಅಲ್ಲಿಯೇ ಬಿಟ್ಟು ಲೋಹಿತ್ ಮನೆಗೆ ಬಂದಿದ್ದರು.

    ಗುತ್ತಿಗೆದಾರನಿಗೆ ತಾನೇ ಆಹ್ವಾನಿಸಿ ಮಂಚ ಹಂಚಿಕೊಂಡ ಲೇಡಿ! ಇವಳ ಹಿನ್ನೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಸೆ.29ರಂದು ಲೋಹಿತ್​ಗೆ ಕರೆ ಮಾಡಿದ ವಿದ್ಯಾ, ನಾಗರಬಾವಿ ಬಳಿ ಬರುವಂತೆ ಸೂಚಿಸಿದ್ದಳು. ಲೋಹಿತ್ ಆಕೆಯನ್ನು ಭೇಟಿಯಾದಾಗ ತಾವಿಬ್ಬರೂ ರೆಸಾರ್ಟ್​ನಲ್ಲಿ ಕಳೆದಿದ್ದ ಖಾಸಗಿ ಫೋಟೊಗಳನ್ನು ಲೋಹಿತ್​ಗೆ ವಿದ್ಯಾ ತೋರಿಸಿ 1 ಕೋಟಿ ರೂ. ಕೊಡುವಂತೆ ಬ್ಲ್ಯಾಕ್​ ಮೇಲ್​ ಮಾಡಿದ್ದಳು. ಆತಂಕಗೊಂಡ ಲೋಹಿತ್ ಆರಂಭದಲ್ಲಿ 2 ಲಕ್ಷ ರೂ. ಕೊಟ್ಟಿದ್ದರು. ಇದಾದ ಕೆಲ ದಿನಗಳ ಬಳಿಕ ವಿದ್ಯಾ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದಳು. ಕೆಲ ದಿನಗಳ ಹಿಂದೆ ಇಬ್ಬರು ಅಪರಿಚಿತ ಹುಡುಗರು ಲೋಹಿತ್​ನ ಭೇಟಿಯಾಗಿ ಪೆನ್​ಡ್ರೈವ್ ಕೊಟ್ಟು ಇದರಲ್ಲಿ ಇರುವುದನ್ನು ನೋಡಿ ಎಂದು ಹೇಳಿ ಹೋಗಿದ್ದರು. ಪೆನ್​ಡ್ರೈ​ನಲ್ಲಿ ಏನಿದೆ ಎಂದು ಪರಿಶೀಲಿಸಿದಾಗ ವಿದ್ಯಾ ಮತ್ತು ಲೋಹಿತ್ ರೆಸಾರ್ಟ್​ನಲ್ಲಿ ಕಳೆದಿದ್ದ ಹಲವಾರು ಖಾಸಗಿ ದೃಶ್ಯಗಳಿದ್ದವು. ವಿದ್ಯಾಗೆ ಕರೆ ಮಾಡಿದ ಲೋಹಿತ್ ಈ ಬಗ್ಗೆ ಪ್ರಶ್ನಿಸಿದ್ದರು. 1 ಕೋಟಿ ರೂ. ಕೊಡದಿದ್ದರೆ, ವಿವಾಹವಾಗುವುದಾಗಿ ನಂಬಿಸಿ ವಂಚಿಸಿರುವುದಾಗಿ ನಿಮ್ಮ ವಿರುದ್ಧ ಪೊಲೀಸರಿಗೆ ದೂರು ಕೊಡುತ್ತೇನೆ ಎಂದು ಬೆದರಿಸಿದ್ದಳು.

    ಗುತ್ತಿಗೆದಾರನಿಗೆ ತಾನೇ ಆಹ್ವಾನಿಸಿ ಮಂಚ ಹಂಚಿಕೊಂಡ ಲೇಡಿ! ಇವಳ ಹಿನ್ನೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಆತಂಕಗೊಂಡ ಲೋಹಿತ್, ಅನ್ನಪೂರ್ಣೆಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹರ್ಬಲ್ ಲೈಫ್ ಪ್ರಾಡಕ್ಟ್ ಮಾರಾಟ ಮಾಡುವುದಾಗಿ ತನ್ನಂತೆಯೇ ಹಲವು ಪ್ರಭಾವಿಗಳನ್ನು ವಿದ್ಯಾ ಬಲೆಗೆ ಬೀಳಿಸಿದ್ದಾಳೆ ಎಂದು ದೂರಿನಲ್ಲಿ ಲೋಹಿತ್ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ವಿದ್ಯಾ ಹನಿಟ್ರ್ಯಾಪ್ ನಡೆಸಿರುವುದು ಪತ್ತೆಯಾಗಿತ್ತು. ಕೂಡಲೇ ವಿಜಯನಗರದ ನಿವಾಸಿ ವಿದ್ಯಾ(32)ಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಆಕೆಗೆ ಸಹಕರಿಸುತ್ತಿದ್ದ ಇಬ್ಬರು ಹುಡುಗರಿಗೆ ಶೋಧ ಮುಂದುವರಿಸಲಾಗಿದೆ.

    ವಿದ್ಯಾ ವಿಐಪಿಗಳನ್ನೇ ಟಾರ್ಗೆಟ್ ಮಾಡಿ ಶ್ರೀಮಂತರು, ರಾಜಕಾರಣಿಗಳು, ಕಾಂಟ್ರಾಕ್ಟರ್​ಗಳಿಗೆ ಇದೇ ಮಾದರಿಯಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದಳು. ಹನಿಟ್ರ್ಯಾಪ್​ಗೆ ಒಳಗಾದವರಿಂದ ಲಕ್ಷಾಂತರ ರೂ. ತೆಗೆದುಕೊಂಡಿದ್ದಾಳೆ ಎನ್ನಲಾಗಿದೆ. ಹೆಸರಿಗೆ ಹರ್ಬಲ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಳು. ಹಲವು ಜನರು ಆಕೆಗೆ ಲಕ್ಷಾಂತರ ರೂ. ಕೊಟ್ಟಿರುವ ಸುಳಿವು ಸಿಕ್ಕಿದೆ.

    ಪರಸ್ತ್ರೀ ಜತೆ ಗ್ರಾಪಂ ಅಧ್ಯಕ್ಷೆ ಗಂಡನ ಕಾಮದಾಟ! ವಾಟ್ಸ್ಆ್ಯಪ್​ ಗ್ರೂಪ್​ಗೆ ತನ್ನದೇ ಫೋಟೋ ತಾನೇ ಹಾಕಿಕೊಂಡ…

    ವಿವಿಧ ಇಲಾಖಾ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಿದ ಕೆಪಿಎಸ್​ಸಿ

    ಬೇಯಿಸಿದ ಮೊಟ್ಟೆ ತಿಂದು ಪ್ರಾಣಬಿಟ್ಟ ಮಹಿಳೆ! ಮೊಟ್ಟೆ ಪ್ರಿಯರನ್ನ ಬೆಚ್ಚಿಬೀಳಿಸುತ್ತೆ ಈ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts