ಹಾಸನದಲ್ಲಿ ಕಾಡಾನೆಗೆ ಗುಂಡಿಕ್ಕಿ ಹತ್ಯೆ

New Project(4)
Published on

ಹಾಸನ: ಬೇಲೂರಿನ ಗೂರ್ಗಿಹಳ್ಳಿ ಕಿಡಿಗೇಡಿಗಳು ಕಾಡಾನೆಯನ್ನು ಗುಂಡಿಕ್ಕಿ ಕೊಂದಿದ್ದಾರೆ.

ಸಯ್ಯದ್ ಸತ್ತರ್ ಎಂಬುವವರ ತೋಟದಲ್ಲಿ ಸುಮಾರು 15 ವರ್ಷದ ಗಂಡಾನೆ ಮೃತಪಟ್ಟಿದೆ. ಆನೆಯ ಮರಣೋತ್ತರ ಪರೀಕ್ಷೆಗೆ ಭದ್ರ ಟೈಗರ್​ನಿಂದ ವಿಶೇಷ ವೈದ್ಯರ ತಂಡ ಆಗಮಿಸುತ್ತಿದೆ.

ಅರೇಹಳ್ಳಿ, ಮಲಸಾವರ ಸುತ್ತಮುತ್ತ 30 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ಇತ್ತೀಚಿಗೆ ಅರೇಹಳ್ಳಿ ಭಾಗದಲ್ಲಿ ಕಾಡಾನೆ ದಾಳಿಗೆ ನಾಲ್ವರು ಕಾರ್ಮಿಕರು ಬಲಿಯಾಗಿದ್ದರು. ಇದೀಗ ಆನೆಯ ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಗುಂಡು ಹಾರಿಸಿ ಹತ್ಯೆ ಮಾಡಿರುವುದು ಕಂಡು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net