ಊರು ತುಂಬ ಇದರದ್ದೇ ಸುದ್ದಿ, ಅಲ್ಲಲ್ಲಿ ಸಗಣಿ ಇಟ್ಟು ಕರೊನಾ ಕಟ್ಟಿಹಾಕಲು ​ಪ್ಲಾನ್​

corona sagani
Published on

ಹಾವೇರಿ: ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಈ ಅಂಗಡಿ ಮಾಲೀಕನ ಐಡಿಯಾ ನೋಡಿ ಜನರು ಬೆಸ್ತುಬಿದ್ದಿದ್ದಾರೆ.

ಹಾವೇರಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ಹಸುವಿನ ಸಗಣಿಯನ್ನು ಅಂಗಡಿ ಮಾಲೀಕ ರಾಜು ಎಂಬುವವರು ಹಿಡಿಗಾತ್ರದಷ್ಟು ಉಂಡೆ ಮಾಡಿ ಅಂಗಡಿ ಮುಂದೆ ಅಲ್ಲಲ್ಲಿ ಇಟ್ಟಿದ್ದಾರೆ. ಇದನ್ನು ಕಂಡ ಪಕ್ಕದ ಅಂಗಡಿಯವ ಮುತ್ತಪ್ಪ ಕೂಡ ತನ್ನ ಅಂಗಡಿ ಮುಂದೆಯೂ ಸಗಣಿ ಇಟ್ಟಿದ್ದಾರೆ. ಊರು ತುಂಬಾ ಈಗ ಇದರದ್ದೇ ಸುದ್ದಿ.

ಸಗಣಿ ಏಕೆ ಇಟ್ಟದ್ದು ಗೊತ್ತಾ? ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದರೂ ಬಹುತೇಕ ಜನ ಕ್ಯಾರೆ ಎನ್ನುತ್ತಿಲ್ಲ. ಇದನ್ನ ಮನಗಂಡ ಅಂಗಡಿಯವ ಗ್ರಾಹಕರು ಬಂದರೆ ಅಲ್ಲಿ ಕೂರಬಾರದು. ಬಂದ ಕೂಡಲೇ ಸಾಮಗ್ರಿ ಖರೀದಿಸಿ ಬೇಗ ಹೊರಡಬೇಕು. ಪಕ್ಕದಲ್ಲಿ ಒಟ್ಟೊಟ್ಟಾಗಿ ಯಾರೂ ನಿಲ್ಲಬಾರದು ಎಂದು ಸಗಣಿಯನ್ನೇ ಅಸ್ತ್ರವನ್ನಾಗಿ ಬಳಸಿದ್ದಾರೆ.

ಆರಂಭದಲ್ಲಿ ಸಗಣಿ ಹಾಕಿದ್ದಕ್ಕೆ ಜನರು ಥೂ ಎಂದು ಮೂದಲಿಸಿದ್ದರಾದರೂ ತದನಂತರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಟ್ಟೆಗೆ ಸಗಣಿ ಮೆತ್ತಿಕೊಳ್ಳುತ್ತೆ ಎಂದು ಜನ ಕೂರಲು ಆ ಕಡೆ ಹೋಗುವುದೇ ಎನ್ನುತ್ತಾರೆ ಮುತ್ತಪ್ಪ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net