ಬಿಹಾರದಲ್ಲೊಂದು ಪೈಶಾಚಿಕ ಕೃತ್ಯ; ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ: ಗಂಡು ಮಗು ಜನನ! | Diabolical Act

dk - 2025-07-08T200739.019
Published on

Diabolical Act: ತಂದೆಯಿಂದಲೇ ಸ್ವಂತ ಮಗಳ ಮೇಲೆ ನಿರಂತರ ಅತ್ಯಾಚಾರ ಮಾಡುವ ಮೂಲಕ ಗಂಡು ಮಗುವಿನ ಜನನಕ್ಕೆ ಕಾರಣವಾದ ಪೈಶಾಚಿಕ ಕೃತ್ಯವೊಂದು ಬಿಹಾರದಲ್ಲಿ ಬೆಳಕಿಗೆ ಬಂದಿದೆ.

ತನ್ನ ತಂದೆ ಮದ್ಯವ್ಯಸನಿಯಾಗಿದ್ದು, ಒಂದು ವರ್ಷದಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. ಗರ್ಭಿಣಿ ಹುಡುಗಿಯನ್ನು ಚಿಕಿತ್ಸೆಗಾಗಿ ರೈಲಿನಲ್ಲಿ ದೆಹಲಿಗೆ ಕರೆದೊಯ್ಯುತ್ತಿದ್ದಾಗ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ವರದಿಯಾಗಿದೆ.

ಇನ್ನು ಆಕೆಯ ಕುಟುಂಬ ಈ ಘಟನೆಯನ್ನು ಮುಚ್ಚಿಡಲು ಪ್ರಯತ್ನಿಸಿದೆ ಎಂದು ಪೊಲೀಸ್​ ತನಿಖೆಯಲ್ಲಿ ತಿಳಿದು ಬಂದಿದೆ. ಇದೀಗ ಆಕೆ ತಂದೆ ಮತ್ತು ಅತ್ಯಾಚಾರ ಮುಚ್ಚಿಡಲು ಪ್ರಯತ್ನಿಸಿದ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದೇಗೆ..?

ರೈಲಿನಲ್ಲಿ ವಾರಣಾಸಿಗೆ ತೆರಳುತ್ತಿದ್ದ ವೇಳೆ ಸಂತ್ರಸ್ತೆ ಯುವತಿ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಯ ಕುಟುಂಬಸ್ಥರು ಮಗುವನ್ನು ಚೀಲದಲ್ಲಿ ಇರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ನಿರಂತರ ಮಗುವಿನ ಆಳು ಶಬ್ದ ಕೇಳಿದ ಪ್ರಯಾಣಿಕರು ಮಗುವನ್ನು ಪತ್ತೆ ಮಾಡಿ ರೈಲ್ವೆ ಪೊಲೀಸ್​ಗೆ ಒಪ್ಪಿಸಿದ್ದಾರೆ. ಬಳಿಕ ತನಿಖೆ ಆರಂಭಿಸಿದ ಸ್ಥಳೀಯ ಪೊಲೀಸರು ಚೀಲದಲ್ಲ ಸಿಮ್​ ಮೂಲಕ ಸಂತ್ರಸ್ತೆ ಮತ್ತು ಕುಟುಂಬವನ್ನು ಪತ್ತೆ ಮಾಡಿದ್ದಾರೆ.

ಬಳಿಕ ತನಿಖೆಗೆ ಒಳಪಡಿಸಿದ ಪೊಲೀಸರಿಗೆ ಅತ್ಯಾಚಾರದ ಬಗ್ಗೆ ಸಂತ್ರಸ್ತೆ ದೂರು ನೀಡಿದ್ದಾಳೆ. ಸಂತ್ರಸ್ತೆ ಸೇರಿ ಕುಟುಂಬಸ್ಥರು ಮಗುವನ್ನು ನಿರಾಕರಿಸಿದ ಕಾರಣ ಮೊರಾದಾಬಾದ್‌ನಲ್ಲಿರುವ ಮಕ್ಕಳ ಕಲ್ಯಾಣ ಸೊಸೈಟಿಯಲ್ಲಿ ಇರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net