

ಬೆಳ್ತಂಗಡಿ: ಹದಿಹರೆಯದ ವಿದ್ಯಾರ್ಥಿಗಳು ಬಾಲಿಶ ವರ್ತನೆ ತೋರದೆ ಹಾಗೂ ದುಶ್ಚಟಗಳಿಗೆ ಬಲಿಯಾಗದೆ ಸರಿಯಾದ ಹೆಜ್ಜೆ ಇಡಬೇಕು. ನಮ್ಮ ವಿವೇಚನೆ ನಮ್ಮ ಕೈಯಲ್ಲಿರಬೇಕು. ಯುವಕ- ಯುವತಿಯರು ಬಾಹ್ಯ ಆಕರ್ಷಣೆಗೆ ಒಳಗಾಗದೆ ಸಾಧನೆಯ ಗುರಿ ಮುಟ್ಟುವ ಕಾರ್ಯ ಮಾಡಬೇಕು ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ. ಹೇಳಿದರು.
ಎಸ್‌ಡಿಎಂ ಕಾಲೇಜಿನ ಮಾನವ ಸಂಪನ್ಮೂಲ ಅಭಿವೃದ್ಧಿ ಕೋಶ ಹಾಗೂ ಮಹಿಳಾ ಅಭಿವೃದ್ಧಿ ಕೋಶಗಳ ವತಿಯಿಂದ ಎರಡು ದಿನಗಳ ಕಾಲ ನಡೆಯುವ ಲಿಂಗ ಸೂಕ್ಷ್ಮತೆ ಅರಿವು ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರಿನ ಸಂವಾದ ಸಹಯಾನ ಯೋಜನೆಯ ಯುವ ಕ್ರಿಯಾ ವಿಭಾಗದ ಸಂಚಾಲಕಿ ಮಂಜುಳಾ ಸುನೀಲ್ ಮಾತನಾಡಿದರು. ಸಂವಾದ ಸಂಸ್ಥೆಯ ತರಬೇತುದಾರರಾದ ಯೋಗೀಶ್ ಮಲ್ಲಿಗೆಮಾಡು, ಕೃಷ್ಣ ಆಳ್ವ, ಉದಯ ಕುಮಾರ್, ಮಲ್ಲಿಕಾ ಜ್ಯೋತಿಗುಡ್ಡೆ ಹಾಗೂ ಪವಿತ್ರಾ ಜ್ಯೋತಿಗುಡ್ಡೆ ಮೊದಲಾದವರಿದ್ದರು.
ಕಾಲೇಜಿನ ಮಾನವ ಸಂಪನ್ಮೂಲ ಅಭಿವೃದ್ಧಿ ಕೋಶದ ಸಂಚಾಲಕ ಡಾ.ಪ್ರಸನ್ನ ಕುಮಾರ ಐತಾಳ್ ಕಾರ್ಯಕ್ರಮ ಸಂಯೋಜಿಸಿದರು. ಭೌತಶಾಸ ಉಪನ್ಯಾಸಕಿ ಅಮೃತಾ ಶೆಟ್ಟಿ ನಿರೂಪಿಸಿದರು. ಮನಃಶಾಸ ವಿಭಾಗದ ಮುಖ್ಯಸ್ಥೆ ಶ್ಯಾಮಿಲಾ ವಂದಿಸಿದರು.