

ಸುಬ್ರಹ್ಮಣ್ಯ: ಸೇವೆ ಮತ್ತು ಸಹಕಾರ ಧೋರಣೆಯಿಂದ ಸಂಘ-ಸಂಸ್ಥೆಗಳು ಕಾರ್ಯಪ್ರವೃತ್ತವಾದರೆ ಅದು ಸಮಾಜದ ಒಳಿಗೆ ಪ್ರಧಾನವಾಗುತ್ತದೆ. ಪರರ ಹಿತ ಕಾಪಾಡುವ ಶ್ರೇಷ್ಠ ಮನಃಸ್ಥಿತಿ ಸಂಘ ಸಂಸ್ಥೆಗಳ ಸದಸ್ಯರು ಬೆಳೆಸಿಕೊಂಡಾಗ ಸಂಸ್ಥೆ ಪ್ರಜ್ವಲಿತವಾಗುತ್ತದೆ. ಸಮಾಜಮುಖಿ ಮನೋಭಾವ ಮಾನಸಿಕ ನೆಮ್ಮದಿಯ ಉದ್ದೀಪನಕ್ಕೆ ಪ್ರಧಾನ ಎಂದು ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹೇಳಿದರು.
ಸುಬ್ರಹ್ಮಣ್ಯ ರೋಟರಿ 2025-26ನೇ ಸಾಲಿನ ಅಧ್ಯಕ್ಷ ಜಯಪ್ರಕಾಶ್ ಆರ್. ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಸುಬ್ರಹ್ಮಣ್ಯ ರೋಟರಿ ಕ್ಲಬ್‌ನ ನಿರ್ಗಮನ ಅಧ್ಯಕ್ಷ ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಪದಗ್ರಹಣ ಅಧಿಕಾರಿ ರೋಟರಿ ಜಿಲ್ಲಾ ಪೂರ್ವ ಗವರ್ನರ್ ಪ್ರಕಾಶ್ ಕಾರಂತ್ ಪದಗ್ರಹಣ ನಡೆಸಿಕೊಟ್ಟರು. ರೋಟರಿ ಸಹಾಯಕ ಗವರ್ನರ್ ಪ್ರೊ.ಬಾಲಕೃಷ್ಣ ಪೈ, ಶಿಕ್ಷಕಿ ಶಿಲ್ಪಾ ಜಯಪ್ರಕಾಶ್, ವಲಯ ಸೇನಾನಿ ವಿಜಯ ಕುಮಾರ್ ಅಮೈ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಮಮೋಹನ್ ಕೆ.ಎನ್., ಸುಬ್ರಹ್ಮಣ್ಯ ರೋಟರಿ ಕ್ಲಬ್ ನಿಕಟಪೂರ್ವಾಧ್ಯಕ್ಷ ಪ್ರಶಾಂತ್ ಕೋಡಿಬೈಲ್, ಕಾರ್ಯದರ್ಶಿ ಚಿದಾನಂದ ಕುಳ, ಕೋಶಾಧಿಕಾರಿ ದಿನೇಶ್ ಎಣ್ಣೆಮಜಲು ಮೊದಲಾದವರಿದ್ದರು. ಕಿಶೋರ್ ಕುಮಾರ್ ಕೂಜುಗೋಡು ಸ್ವಾಗತಿಸಿದರು. ರಾಮಕೃಷ್ಣ ಮಲ್ಲಾರ ನಿರೂಪಿಸಿದರು. ಭವಾನಿಶಂಕರ ಪೈಲಾಜೆ ವಂದಿಸಿದರು.
ಪ್ರತಿಭಾ ಪುರಸ್ಕಾರ
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪಿಎಚ್‌ಎಫ್ ಪಡೆದ ವಿಶ್ವನಾಥ ನಡುತೋಟ, ಮಾಲಪ್ಪ ಸಂಕೇಶ, ಚಂದ್ರಶೇಖರ ನಾಯರ್, ಜಯಪ್ರಕಾಶ್ ಆರ್. ಅವರನ್ನು ಗೌರವಿಸಲಾಯಿತು. ಅಧ್ಯಕ್ಷ ಚಂದ್ರಶೇಖರ ನಾಯರ್ ಹಾಗೂ ಕಾರ್ಯದರ್ಶಿ ಚಿದಾನಂದ ಕುಳ ಅವರನ್ನು ಸನ್ಮಾನಿಸಲಾಯಿತು. ವಿಶ್ವನಾಥ ನಡುತೋಟ ಸಂಪಾದಕತ್ವದ ಬುಲೆಟಿನ್ ಕುಮಾರಧಾರಾವನ್ನು ಅಸಿಸ್ಟೆಂಟ್ ಗವರ್ನರ್ ಪ್ರೊ.ಬಾಲಕೃಷ್ಣ ಪೈ ಬಿಡುಗಡೆಗೊಳಿಸಿದರು.