

ಬೆಳ್ತಂಗಡಿ: ನಾವೂರಿನಲ್ಲಿ ಸರ್ವೋದಯ ಟ್ರಸ್ ನೇತತ್ವದಲ್ಲಿ ಆಯುಷ್ ಫೆಡರರೇಶನ್ ಆಫ್ ಇಂಡಿಯಾ, ರೋಟರಿ ಕ್ಲಬ್, ಪ್ರಸನ್ನ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆ, ಬಾಹುಬಲಿ ಕ್ರೆಡಿಟ್ ಸೌಹಾರ್ದ ಪತ್ತಿನ ಸಹಕಾರಿ ಸಂಘ, ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ ಸಹಭಾಗಿತ್ವದಲ್ಲಿ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು.
ಶಾಸಕ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು. ಟ್ರಸ್ಟ್ ಅಧ್ಯಕ್ಷ ನೇಮಿರಾಜ ಆರಿಗ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು, ಕಾರ್ಯದರ್ಶಿ ಡಾ.ಎಂ.ದಯಾಕರ್, ನಿಕಟಪೂರ್ವ ಅಧ್ಯಕ್ಷ ಪೂರಣ್ ವರ್ಮ, ನಿಕಟಪೂರ್ವ ಕಾರ್ಯದರ್ಶಿ ಸಂದೇಶ್ ರಾವ್, ಎಕ್ಸೆಲ್ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ರಾಜಶೇಖರ ಅಜ್ರಿ, ಡಾ.ಶಿವರಾಜ ಪಜಿಲ, ಡಾ.ಶ್ರಾವ್ಯಾ, ಡಾ.ಕವಿತಾ, ಹೋಲಿ ಕ್ರಾಸ್ ಚರ್ಚ್ ಮಂಜೊಟ್ಟಿ ಧರ್ಮಗುರು ಪೌಲ್ ಸೆಬಾಸ್ಟಿನ್, ನಾವೂರು ಗ್ರಾ.ಪಂ. ಅಧ್ಯಕ್ಷ ಸುನಂದಾ, ಪ್ರಮುಖರಾದ ಹರೀಶ್ ಸಾಲ್ಯಾನ್ ಮೊರ್ತಾಜೆ, ಲಕ್ಷ್ಮಣ ಗೌಡ ಇರ್ತಿಲಾಲ್, ಎ.ಬಿ.ಉಮೇಶ್ ಅತ್ಯಡ್ಕ, ಎಸ್.ಎನ್.ಭಟ್ ಬೊಳಿಯಂಜಿ, ಸೇವಿಯರ್ ಪಾಲೇಲಿ, ಸುನೀಲ್ ನಾವೂರು, ಮುನಿರಾಜ ಅಜ್ರಿ, ಹಬೀಬ್ ಸಾಹೇಬ್ ನಡ, ಗಣೇಶ್ ಕಣಾಲು, ವೇದಾವತಿ ನಾವೂರು, ಪ್ರಿಯಾ ಸಂಪಿಂಜ, ಹಸೈನಾರ್ ನಾವೂರು, ಉಮೇಶ್ ಪ್ರಭು, ಮೋಹನ್ ಕಾರಿಂಜ, ಅಜಿತ್ ಆರಿಗ, ಮುಖ್ಯ ಶಿಕ್ಷಕಿ ರೋಹಿಣಿ, ರಾಜೇಂದ್ರ, ಪ್ರವೀಣ್ ವಿ.ಜಿ., ಗ್ರಾಮಾಭಿವೃದ್ಧಿ ಯೋಜನೆಯ ಉಷಾ ಬೆಳಾಲು, ಜನಾರ್ದನ ಕಡ್ತ್ಯಾರು, ದರ್ಣಪ್ಪ ಮೂಲ್ಯ, ದಿನೇಶ್ ಪ್ರಭು, ಗಣೇಶ್ ಗೌಡ ಹಾಗೂ ಸೆಬಾಸ್ಟಿನ್ ವಿ.ಪಿ., ಸಹಕಾರ ನೀಡಿದ ಸಂಘ ಸಂಸ್ಥೆಗಳ ಪ್ರಮುಖರಾದ ಶ್ಯಾಮ ಭಟ್ ಅತ್ತಾಜೆ, ಅಶ್ವತ್ಥ ಭಟ್ ಪಡ್ಪು, ಹನೀಫ್ ಕೇಲ್ತಾಜೆ, ಶಾಹುಲ್ ನಾವೂರು, ಜಯಾನಂದ ಗೌಡ, ಉಮೇಶ್ ಮಾಲೂರು, ತೀಕ್ಷಿತ್ ದಿಡುಪೆ, ರಮೇಶ್ ನೂಜಿಲೆ, ರಾಮಣ್ಣ ಕುಂಬಾರ, ಲೋಕೇಶ್ ಕುಕ್ಕಾವು, ಹರೀಶ್ ವಾಂಜ್ಯ, ಪ್ರಕಾಶ್ ಇಜ್ಜಲ, ಪ್ರಮೋದ್ ಗೌಡ ಬೆದ್ರಬೆಟ್ಟು, ಪ್ರಧಾನ ಸಂಚಾಲಕ ಡಾ.ಪ್ರದೀಪ್ ಆಟಿಕುಕ್ಕೆ ಉಪಸ್ಥಿತರಿದ್ದರು. ಹರೀಶ್ ಕಾರಿಂಜ ಸ್ವಾಗತಿಸಿದರು.