ಜಂಟಿ ಸರ್ವೇ ಸಮಾಲೋಚನಾ ಸಭೆ

New Project (19)
Published on

ಕಡಬ: ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಕಡಬ ತಾಲೂಕಿನಲ್ಲಿ ಜಂಟಿ ಸರ್ವೇ ನಡೆಸಲು ಆರಂಭಿಸಿದ್ದು, ಈ ಬಗ್ಗೆ ಕೊಣಾಜೆ ಗ್ರಾಮಸ್ಥರು ಕೊಣಾಜೆಯಲ್ಲಿ ಸಮಾಲೋಚನಾ ಸಭೆ ನಡೆಸಿದರು.

ಜಂಟಿ ಸರ್ವೇ ನಡೆಸುವ ಸಂದರ್ಭದಲ್ಲಿ ಗ್ರಾಮಸ್ಥರಿಗೆ, ಸಂಬಂಧಿಸಿದವರಿಗೆ ಮೊದಲೇ ಮಾಹಿತಿ ನೀಡಬೇಕು ಎಂದು ಗ್ರಾಮಸ್ಥರು ಪ್ರಸ್ತಾಪಿಸಿದರು. ಜಂಟಿ ಸರ್ವೇ ಮಾಡುವಾಗ ಫ್ಲೋಟಿಂಗ್ ಆಗದ ಸರ್ವೇ ನಂಬರನ್ನು ಮೊದಲ ಆದ್ಯತೆ ಕೊಟ್ಟು ಜಂಟಿ ಸರ್ವೇ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಬೇಡಿಕೆಗೆ ಸ್ಪಂದನೆ ನೀಡದೇ ಇದ್ದಲ್ಲಿ ಮುಂದಿನ ದಿನದಲ್ಲಿ ತಾಲೂಕು ಕಚೇರಿ ಎದುರುಗಡೆ ಎಲ್ಲ ರೈತರು ಮನೆಯವರೊಂದಿಗೆ ಪ್ರತಿಭಟಿಸುವ ಎಚ್ಚರಿಕೆ ನೀಡಲಾಗಿದೆ ಎಂದರು.

ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ಜನರ ಆತಂಕದ ಬಗ್ಗೆ ಮುಂದಿನ ದಿನದಲ್ಲಿ ಹೋರಾಟ ಮಾಡಿ ಸಮಸ್ಯೆ ಬಗೆಯಹರಿಸುವುದು ಎಂದು ಅಭಿಪ್ರಾಯ ತಿಳಿಸಿದರು. ನಮ್ಮ ಹೋರಾಟ ಪಕ್ಷಾತೀತವಾಗಿದ್ದು ಮತ್ತು ರೈತರು, ಎಲ್ಲ ಮನೆ ಮಂದಿ ಸೇರಿ ರೈತರ ಬದುಕಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಇದೆ. ಮಲೆನಾಡು ಜನ ಹಿತರಕ್ಷಣಾ ವೇದಿಕೆ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಸಭೆ ಕರೆದು ರೈತರ ಫ್ಲೋಟಿಂಗ್ ಸಮಸ್ಯೆ ಬಗ್ಗೆ ಹೋರಾಟ ನಡೆಸುವ ರೂಪುರೇಷೆ ಮಾಡುವ ಬಗ್ಗೆ ಸಭೆಯಲ್ಲಿ ತೀ ರ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net