ಪಂಜ ಲಯನ್ಸ್ ಪದಾಧಿಕಾರಿಗಳ ಪದಗ್ರಹಣ

New Project (13)
Published on

ಸುಬ್ರಹ್ಮಣ್ಯ: ಪಂಜ ಲಯನ್ಸ್ ಕ್ಲಬ್ ಪದಗ್ರಹಣ ಶನಿವಾರ ಪಡ್ಪಿನಂಗಡಿ ನಡ್ಕ ಶಿವ ಗೌರಿ ಕಲಾಮಂದಿರದಲ್ಲಿ ನಡೆಯಿತು. ನೂತನ ಅಧ್ಯಕ್ಷ ನಾಗೇಶ್ ತೆಂಕಪ್ಪಾಡಿ ಕಿನ್ನಿಕುಮ್ರಿ ಮತ್ತು ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ ಜಿಲ್ಲಾ ಪ್ರಥಮ ಉಪಗವರ್ನರ್ ಎಚ್.ಎಂ.ತಾರಾನಾಥ್ ಪದಪ್ರದಾನ ಮಾಡಿದರು.

ನಿರ್ಗಮನ ಅಧ್ಯಕ್ಷ ಶಶಿಧರ್ ಪಳಂಗಾಯ ಸಭಾಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಜಿಲ್ಲಾ ಪ್ರಥಮ ಉಪ ಗವರ್ನರ್ ಎಚ್.ಎಂ.ತಾರಾನಾಥ್, ವಲಯಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಮತ್ತು ರವ್ಯಾ ದಿಲೀಪ್ ಬಾಬ್ಲುಬೆಟ್ಟು ಅವರನ್ನು ಸನ್ಮಾನಿಸಲಾಯಿತು.

ಜಯಂತಿ ನಾಗೇಶ್, ಪ್ರಾಂತೀಯ ಅಧ್ಯಕ್ಷ ಪ್ರೊ.ಕೆ.ರಂಗಯ್ಯ ಶೆಟ್ಟಿಗಾರ್, ವಲಯಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಕಾರ್ಯದರ್ಶಿ ಮೋಹನದಾಸ್ ಕೂಟಾಜೆ, ಕೋಶಾಧಿಕಾರಿ ಸುರೇಶ್ ಕುಮಾರ್ ನಡ್ಕ, ನೂತನ ಕಾರ್ಯದರ್ಶಿ ಕರುಣಾಕರ ಎಣ್ಣೆಮಜಲು, ನೂತನ ಕೋಶಾಧಿಕಾರಿ ವಾಸುದೇವ ಮೇಲ್ಪಾಡಿ ಮೊದಲಾದವರಿದ್ದರು. ನಿರ್ಗಮನ ಅಧ್ಯಕ್ಷ ಶಶಿಧರ್ ಪಳಂಗಾಯ ಸ್ವಾಗತಿಸಿದರು. ಪುರಂದರ ಪನ್ಯಾಡಿ ಮತ್ತು ಸುಶ್ಮಿತಾ ಜಾಕೆ ನಿರೂಪಿಸಿದರು. ವಾಸುದೇವ ಮೇಲ್ಪಾಡಿ ವಂದಿಸಿದರು.

ಶೈಕ್ಷಣಿಕ ಸಹಕಾರ

ಎಸ್ಸೆಸ್ಸೆಲ್ಸಿಯಲ್ಲಿ 616 ಅಂಕ ಪಡೆದ ಉತ್ತಮ್ ಕೆ.ಕಣ್ಕಲ್ ಅವರಿಗೆ ಶೈಕ್ಷಣಿಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಮೊಗ್ರ ಸರ್ಕಾರಿ ಶಾಲೆಗೆ ಪುಸ್ತಕ, ಸ್ಟೇಷನರಿ ವಿತರಣೆ, ನೇಲ್ಯಡ್ಕ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರಕ್ಕೆ ಆರ್ಥಿಕ ಸಹಕಾರ, ಪಡ್ಪಿನಂಗಡಿ ಸರಕಾರಿ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಕ್ಕೆ ಆರ್ಥಿಕ ಸಹಕಾರ ನೀಡಲಾಯಿತು. ಕ್ಲಬ್‌ನ ಸದಸ್ಯರ ಮನೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಯಿತು. ಇತ್ತೀಚೆಗೆ ನಿಧನರಾದ ನವೀನ ಮೊಗ್ರ ಅವರ ಕುಟುಂಬಕ್ಕೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net