ಸರ್ಕಾರಿ ಶಾಲೆಯ ಸೇವೆ ದೇವರ ಸೇವೆ : ಕಿರಣ್ ಪುಷ್ಪಗಿರಿ ಅಭಿಮತ

New Project (6)
Published on

ಬೆಳ್ತಂಗಡಿ: ಸರ್ಕಾರಿ ಶಾಲೆಗಳಲ್ಲಿ ಅನೇಕ ಸೌಲಭ್ಯ, ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಉತ್ತಮ ಪರಿಸರದ ವಾತಾವರಣ ಇದೆ. ರಾಜಕೇಸರಿ ಟ್ರಸ್ಟ್ ಬ್ಯಾಗ್, ಪುಸ್ತಕ, ಇನ್ನಿತರ ಕೊಡುಗೆ ನೀಡಿ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯ ರೂಪಿಸುತ್ತಿದೆ. ಸರ್ಕಾರಿ ಶಾಲಾ ಸೇವೆ ದೇವರ ಸೇವೆ ಮಾಡಿದಂತೆ ಎಂದು ಧಾರ್ಮಿಕ ಮುಖಂಡ ಕಿರಣ್ ಪುಷ್ಪಗಿರಿ ಹೇಳಿದರು.

ಸವಣಾಲು ಗುತ್ತನಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ರಾಜಕೇಸರಿ ಟ್ರಸ್ಟ್ ವತಿಯಿಂದ ಉಚಿತ ಬ್ಯಾಗ್, ಪೆನ್ನು ವಿತರಿಸಿ ಮಾತನಾಡಿದರು.

ಪತ್ರಕರ್ತ ಮನೋಹರ್ ಬಳಂಜ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಮೆಲಂತಬೆಟ್ಟು ಗ್ರಾಪಂ ಉಪಾಧ್ಯಕ್ಷ ಲೋಕನಾಥ್ ಶೆಟ್ಡಿ, ರಾಜಕೇಸರಿ ಟ್ರಸ್ಟ್ ಸ್ಥಾಪಕಾದ್ಯಕ್ಷ ದೀಪಕ್ ಜಿ., ತಾಲೂಕು ಅಧ್ಯಕ್ಷ ಸತೀಶ್ ಕಂಗಿತ್ತಿಲ್, ಗೌರಾವಾಧ್ಯಕ್ಷರಾದ ಸಂದೀಪ್ ಬೆಳ್ತಂಗಡಿ, ಪ್ರೇಮ್‌ರಾಜ್ ಲಾಯಿಲ, ಪದಾದಿಕಾರಿಗಳಾದ ಜಗದೀಶ್ ಲಾಯಿಲ, ಶರತ್ ಕರಾಯ, ದೇವರಾಜ್ ಪೂಜಾರಿ, ವಿನೋದ್ ಲಾಯಿಲ ಉಪಸ್ಥಿತರಿದ್ದರು. ಪ್ರಭಾರ ಮುಖ್ಯಶಿಕ್ಷಕಿ ನಮಿತಾ ಆರ್. ಸ್ವಾಗತಿಸಿದರು. ಸಹಶಿಕ್ಷಕ ವಸಂತ ಗುಡಿಗಾರ್ ವಂದಿಸಿದರು. ಸಹಶಿಕ್ಷಕಿ ಶ್ಯಾಮಲಾ ಕೆ. ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net