

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕುಪೆಟ್ಟಿ- ಉಪ್ಪಿನಂಗಡಿ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಸಚಿವರಿಗೆ ಆರು ಬಾರಿ ಮನವಿ ಮಾಡಿದರೂ 1 ರೂ. ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ವಾಣಿಜ್ಯ, ಶೈಕ್ಷಣಿಕ ಸಹಿತ ಹಲವಾರು ಕೇಂದ್ರಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು, ನಮ್ಮ ಕೂಗು ಸರ್ಕಾರದ ಕಿವಿಗೆ ಬಿದ್ದಿಲ್ಲ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಬಿಜೆಪಿ ಬೆಳ್ತಂಗಡಿ ಮಂಡಲ ಕಣಿಯೂರು ಮಹಾಶಕ್ತಿ ಕೇಂದ್ರ ನೇತೃತ್ವದಲ್ಲಿ ಉಪ್ಪಿನಂಗಡಿ- ಬೆಳ್ತಂಗಡಿ ಮುಖ್ಯ ರಸ್ತೆಯ ಕುಪ್ಪೆಟ್ಟಿ- ಕಲ್ಲೇರಿ- ಉಪ್ಪಿನಂಗಡಿ ರಸ್ತೆ ಸರಿಪಡಿಸುವಂತೆ ಕಲ್ಲೇರಿ ಪೇಟೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೆಳಾಲು, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಯಾನಂದ ಕಲ್ಲಾಪು, ಪದ್ಮುಂಜ ಪ್ಯಾಕ್ಸ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ಬಾರ್ಯ ಪ್ಯಾಕ್ಸ್ ಅಧ್ಯಕ್ಷ ಪ್ರವೀಣ್ ರೈ ಪೊರ್ಕಳ, ಕಣಿಯೂರು ಗ್ರಾ.ಪಂ. ಅಧ್ಯಕ್ಷ ಸೀತಾರಾಮ ಮಡಿವಾಳ, ಬಂದಾರು ಗ್ರಾ.ಪಂ. ಅಧ್ಯಕ್ಷ ದಿನೇಶ್ ಗೌಡ ಖಡಿಂಗ, ಕಣಿಯೂರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮಹೇಶ್ ಕೋಟ್ಯಾನ್ ಜೆಂಕ್ಯಾರ್, ತಣ್ಣೀರುಪಂತ ಪ್ಯಾಕ್ಸ್ ನಿರ್ದೇಶಕರಾದ ಸುನೀಲ್ ಅಣಾವು, ಜಯಂತಿ ಪಾಲೇದು, ಪದ್ಮುಂಜ ಪ್ಯಾಕ್ಸ್ ಉಪಾಧ್ಯಕ್ಷ ಅಶೋಕ್ ಪಾಂಜಳ, ನಿರ್ದೇಶಕ ಉದಯ್ ಬಿ.ಕೆ., ಇಳಂತಿಲ ಗ್ರಾ.ಪಂ. ಸದಸ್ಯ ತಿಮ್ಮಪ್ಪ ಗೌಡ, ತಣ್ಣೀರುಪಂತ ಗ್ರಾ.ಪಂ. ಸದಸ್ಯ ಸಾಮ್ರಾಟ್ ಕರ್ಕೇರ ಹಾಗೂ ಅನಿಲ್ ಪಾಲೇದು ಮೊದಲಾದವರಿದ್ದರು.
ಉಪ್ಪಿನಂಗಡಿ ಪೊಲೀಸ್ ಠಾಣಾ ತನಿಖಾ ವಿಭಾಗದ ಎಸ್ಐ ಗೋಪಿನಾಥ್ ಸಹಕರಿಸಿದರು. ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಬೆಳಾಲು, ಕಣಿಯೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಗೌಡ ಮುಗೇರಡ್ಕ, ತಣ್ಣೀರುಪಂತ ಪ್ಯಾಕ್ಸ್ ನಿರ್ದೇಶಕ ಪ್ರಭಾಕರ ಗೌಡ ಇದ್ದರು.
ಸಚಿವರೇ ಖುದ್ದು ಭೇಟಿ ಇತ್ತರೂ ರಸ್ತೆಯ ಅಭಿವೃದ್ಧಿಗೆ ಅನುದಾನ ನೀಡಲು ಆಗಿಲ್ಲವೆಂದರೆ ಇದು ಸಚಿವರು ಲೋಪವಲ್ಲ, ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂಬುದಕ್ಕೆ ಸಾಕ್ಷಿ. ಬೇಸಿಗೆಯೊಳಗೆ ಮರು ಡಾಂಬರು ಆಗದೇ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಹರೀಶ್ ಪೂಂಜ, ಶಾಸಕ