ಪಾಡ್ಯಾರು ಶಾಲೆ ವಿದ್ಯಾರ್ಥಿಗಳಿಗೆ ಸೌಲಭ್ಯ ವಿತರಣೆ

New Project (40)
Published on

ಮೂಡುಬಿದಿರೆ: ಪಾಡ್ಯಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ದಾನಿಗಳಿಂದ ಒದಗಿಸಲಾದ ಶಾಲಾ ಬ್ಯಾಗ್, ನೋಟ್ ಪುಸ್ತಕ, ಬರವಣಿಗೆ ಸಾಮಗ್ರಿಗಳು, ಊಟದ ಬಟ್ಟಲು, ಸ್ಟೀಲ್ ಲೋಟ ಮತ್ತು ನೀರಿನ ಬಾಟಲ್ ಸಹಿತ ಸೌಲಭ್ಯಗಳನ್ನು ಕೇಮಾರು ಸಾಂದೀಪನಿ ಸಾಧನಾಶ್ರಮದ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ವಿತರಿಸಿದರು.

ಬೆಂಗಳೂರಿನ ಧೀರಜ್ ಮತ್ತು ಸುರೇಂದ್ರ ಕಾಮತ್ ನೀಡಿದ ಕ್ರೀಡಾ ಸಾಮಗ್ರಿಗಳನ್ನು ಮತ್ತು ಸಿಎ ಬ್ಯಾಂಕ್ ಬೆಳುವಾಯಿ ಒದಗಿಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಲೆಗೆ ಹಸ್ತಾಂತರಿಸಲಾಯಿತು.

ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ನಾಗೇಶ್ ಎಸ್., ಶಾಲಾ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷೆ ಲಲಿತಾ, ಅಧ್ಯಕ್ಷ ರಮೇಶ್ ಆಚಾರ್ಯ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಪ್ರಸನ್ನ ಶೆಣೈ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ರಾಬರ್ಟ್, ಸ್ವಯಂಸೇವಕ ಶಿಕ್ಷಕಿ ಪ್ರತಿಭಾ, ಮಲ್ಲಿಕಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net