

ಆತನು ಆಗಮಿಸಿದಾಗ, ಜನರು ಅವನಿಗೆ ಕೊಟ್ಟು, ಇದು ಪ್ರವಾದಿ ನಿಮಗೆ ನೀಡಿದ ಸಮರದಲ್ಲಿ ಸಂಪಾದಿಸಿದ ಹಣದ ಪಾಲು ಎಂದರು. ಅವನು ಅದನ್ನು ತೆಗೆದುಕೊಂಡು ಪ್ರವಾದಿಯವರ ಹತ್ತಿರ ಹೋಗಿ, ‘ಇದೇನು?’ ಎಂದನು. ಪ್ರವಾದಿಯವರು, ‘ನಾನು ಕೊಟ್ಟಿರುವ ನಿನ್ನ ಪಾಲು’ ಎಂದಾಗ ಆತ ‘ನಾನು ಇದಕ್ಕಾಗಿ ತಮ್ಮೊಂದಿಗೆ ಸೇರಿರಲಿಲ್ಲ, ವೈರಿಗಳ ಬಾಣ ತಾಗಿ ಸ್ವರ್ಗಕ್ಕೆ ಸೇರಲೆಂದು ಜಿಹಾದ್ನಲ್ಲಿ (ಧರ್ಮಯುದ್ಧ) ಭಾಗವಹಿಸಿದ್ದೆ’ ಎಂದನು. ಆಗ ಪ್ರವಾದಿ, ‘ನಿನ್ನ ಅಭಿಲಾಷೆ ಸತ್ಯವೇ ಎಂದಾದರೆ ಅಲ್ಲಾಹನು ಅದನ್ನು ಪೂರ್ಣಗೊಳಿಸುವನು’ ಎಂದರು.
ಕೆಲವೇ ದಿನಗಳ ಬಳಿಕ ಒಂದು ಯುದ್ಧ ಜರುಗಿತು. ಇವನೂ ಹೋದನು. ಜನ ಅವನ ಮೃತ ದೇಹವನ್ನು ಹೊತ್ತು ತಂದು ಪ್ರವಾದಿಯವರ ಹತ್ತಿರ ಇಳಿಸಿದರು, ಆತನ ಗಂಟಲಲ್ಲಿ ವೈರಿಗಳ ಬಾಣವಿತ್ತು. ಆಗ ಪ್ರವಾದಿ, ‘ಇವನು ಅಲ್ಲಾಹನಲ್ಲಿ ಪ್ರಾಮಾಣಿಕ ಅಭಿಲಾಷೆ ಹೊತ್ತಿದ್ದನು. ಅಲ್ಲಾಹನು ಅದನ್ನು ಪೂರ್ಣಗೊಳಿಸಿದನು’ ಎಂದರು. ನಂತರ ಆತನಿಗೆ ತಮ್ಮ ನಿಲುವಂಗಿಯ ಕಫನ್ ತೊಡಿಸಿ, ಜನಾಝå್ ನಮಾಜ್ ಮಾಡಿ ಹೀಗೆ ಪ್ರಾರ್ಥಿಸಿದರು: ಓ ಅಲ್ಲಾಹ್, ಇವನು ನಿನ್ನ ದಾಸ, ನಿನ್ನ ಮಾರ್ಗದಲ್ಲಿ ಹುತಾತ್ಮನಾದವನು. ನಾನು ಅದಕ್ಕೆ ಸಾಕ್ಷಿಯಾಗಿದ್ದೇನೆ. ಭಕ್ತನ ಬಯಕೆ ಈಡೇರಿದಂತಾಯಿತು.