ಹುಟ್ಟಿದ ಕೂಡಲೇ ತಾಯಿಯನ್ನೇ ತಿಂದುಹಾಕುವ ಡೆಡ್ಲಿ ಜೀವಿ ಯಾವುದು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ! Deadly creature

Deadly creature
Published on

Deadly creature  : ಈ ಜಗತ್ತು ಸಾಕಷ್ಟು ನಿಗೂಢಗಳಿಂದ ಕೂಡಿರುವುದು ಹೊಸ ಸಂಗತಿಯೇನಲ್ಲ. ವಿಷ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದಷ್ಟಿದೆ. ಈಗ ತಿಳಿದುಕೊಂಡಿರುವುದು ಒಂದು ಬೊಗಸೆಯಷ್ಟು ಮಾತ್ರ. ಮನುಷ್ಯನಿಂದ ಹಿಡಿದು ಎಲ್ಲ ಪ್ರಾಣಿಗಳಲ್ಲೂ ಒಂದೊಂದು ವಿಶೇಷತೆ ಮತ್ತು ವಿಚಿತ್ರ ಗುಣಗಳಿರುತ್ತವೆ. ಅವುಗಳ ಬಗ್ಗೆ ತಿಳಿದಾಗ ನಮ್ಮ ಹುಬ್ಬೇರುತ್ತದೆ. ಕೆಲವೊಂದು ಜೀವಿಗಳ ವರ್ತನೆಗಳು ಎಷ್ಟೊಂದು ವಿಚಿತ್ರವಾಗಿವೆ ಅಂದರೆ ನಿಜಕ್ಕೂ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ. ಇದೀಗ ಅಂಥದ್ದೇ ಜೀವಿಯೊಂದರ ಬಗ್ಗೆ ತಿಳಿಸಿಕೊಡುತ್ತೇವೆ.

ಹುಟ್ಟಿದ ತಕ್ಷಣ ತನ್ನ ತಾಯಿಯನ್ನೇ ತಿನ್ನುವ ಪ್ರಾಣಿಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಬಹುಶಃ ಕೆಲವರಿಗೆ ಸಿಂಹ, ಚಿರತೆ, ಹುಲಿ ಹಾಗೂ ಘೇಂಡಾಮೃಗಗಳಂತಹ ಪ್ರಾಣಿಗಳು ನೆನಪಿಗೆ ಬರಬಹುದು. ಇನ್ನು ಕೆಲವರು ಆ ರೀತಿಯ ಜೀವಿ ಇರುವುದಕ್ಕೆ ಸಾಧ್ಯವಿಲ್ಲ ಎನ್ನಬಹುದು. ಆದರೆ, ಈ ಲೇಖನ ಓದಿದ ಬಳಿಕ ನೀವು ಆಶ್ಚರ್ಯ ಪಡುವುದಂತೂ ಖಂಡಿತ.

ಅದೊಂದು ಚಿಕ್ಕ ಪ್ರಾಣಿ. ಮನೆಗಳಲ್ಲಿ ಮತ್ತು ಹೊಲಗಳಲ್ಲಿ ಸಣ್ಣ ರಂಧ್ರಗಳಲ್ಲಿ ನಾವು ಅದನ್ನು ನೋಡಿರುತ್ತೇವೆ. ಯಾವ ಜೀವಿ ಅಂದರೆ ಅದುವೇ ಹೆಣ್ಣು ಚೇಳು. ವಿಷ ಜಂತುಗಳ ಪಟ್ಟಿ ಸಿದ್ಧಪಡಿಸಿದರೆ ಅದರಲ್ಲಿ ಚೇಳುಗಳಿಗೆ ಒಂದು ಸ್ಥಾನ ಫಿಕ್ಸ್​.

ಒಂದು ಚೇಳು 2 ಮಿಲಿಗ್ರಾಂ ವಿಷವನ್ನು ಹೊಂದಿರುತ್ತದೆ. ಚೇಳುಗಳ ಕೊಂಡಿಯಲ್ಲಿ ಮಾರ್ಕಾಟಾಕ್ಸಿನ್ ಎಂಬ ವಿಷವಿದೆ. ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಹೆಚ್ಚಾಗಿ ಈ ವಿಷವನ್ನು ಹೊರತೆಗೆಯುತ್ತಾರೆ. ರಕ್ತನಾಳಗಳಲ್ಲಿ ಹೊಸ ರಕ್ತ ಕಣಗಳ ರಚನೆಗೆ ಮತ್ತು ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಈ ವಿಷ ಸಹ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

Deadly creature

ಒಂದು ಹೆಣ್ಣು ಚೇಳು ಒಂದೇ ಸಮಯದಲ್ಲಿ ಹಲವಾರು ಮರಿಗಳಿಗೆ ಜನ್ಮ ನೀಡುತ್ತದೆ. ಅವುಗಳನ್ನು ರಕ್ಷಿಸಲು ತಾಯಿ ಚೇಳು ತನ್ನ ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತದೆ. ಮರಿಗಳನ್ನು ಹೊತ್ತೊಯ್ಯುವಾಗ, ಎಳೆಯ ಚೇಳುಗಳು ತಾಯಿಯ ಮಾಂಸವನ್ನು ತಿನ್ನುತ್ತವೆ. ತಾಯಿ ಚೇಳಿನ ದೇಹವು ಟೊಳ್ಳಾಗುವವರೆಗೆ ಮತ್ತು ಸಾಯುವವರೆಗೂ ಮಾಂಸವನ್ನು ಕಿತ್ತು ತಿನ್ನುತ್ತವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net