ಹೊಟ್ಟೆಯ ಬೊಜ್ಜು ಕರಗಿಸಬೇಕೇ? ನೀವು ತಪ್ಪದೇ ಈ ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕು | Belly Fat

Belly Fat
Published on

Belly Fat : ಹೊಟ್ಟೆ ಬೆಳೆದಷ್ಟು ದೇಹವು ಅಸಹ್ಯವಾಗಿ ಕಾಣುತ್ತದೆ. ಹೊಟ್ಟೆಯಲ್ಲಿ ಬೊಜ್ಜು ಹೊಂದಿರುವ ಬಹುತೇಕರು ಪ್ರತಿದಿನ ಕನ್ನಡಿ ನೋಡುವಾಗ ಹೇಗಾದರೂ ಮಾಡಿ ತಮ್ಮ ಹೊಟ್ಟೆಯನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಒಂದು ಬಾರಿಯಾದರೂ ಯೋಚನೆ ಮಾಡುತ್ತಾರೆ. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗುತ್ತಿಲ್ಲ. ಅಂತಹವರಲ್ಲಿ ನೀವು ಕೂಡ ಒಬ್ಬರಾಗಿದ್ದರೆ, ಈಗಲೇ ನಿಮ್ಮ ಹೊಟ್ಟೆಯನ್ನು ಕಡಿಮೆ ಮಾಡಿಕೊಳ್ಳಲು ನೀವು ಮಾಡಿಕೊಳ್ಳಬೇಕಾದ ಜೀವನಶೈಲಿಯ ಬದಲಾವಣೆಗಳ ಬಗ್ಗೆ ನಾವೀಗ ತಿಳಿಯೋಣ.

ನೀವು ನೆನಪಿನಲ್ಲಿಡಬೇಕಾದ ಮೊದಲ ವಿಷಯವೇನೆಂದರೆ ತೂಕವನ್ನು ಕಳೆದುಕೊಳ್ಳುವುದು ಒಂದು ಸಣ್ಣ ಪ್ರಕ್ರಿಯೆಯಲ್ಲ. ಇದು ಖಂಡಿತವಾಗಿಯೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅದು ಕೂಡ ಅವರವರ ಬದ್ಧತೆಯ ಮೇಲೆ ಅವಲಂಬಿತವಾಗಿರುತ್ತದೆ.

ಡಯಟ್​

ನೀವು ತೂಕ ಇಳಿಸಿಕೊಳ್ಳಲು ಬಯಸಿದಾಗ, ಮೊದಲು ನಿಮ್ಮ ಆಹಾರ ಕ್ರಮದ ಬಗ್ಗೆ ನೀವು ಜಾಗರೂಕರಾಗಿರಬೇಕು. ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರವನ್ನು ಮಾತ್ರ ಸೇವಿಸಬೇಕು. ಸಕ್ಕರೆ ತಿಂಡಿಗಳು ಮತ್ತು ಬಿಳಿ ಬ್ರೆಡ್‌ನಂತಹ ಸಂಸ್ಕರಿಸಿದ ಆಹಾರಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ಆದಷ್ಟು ತಪ್ಪಿಸಿ. ಅವುಗಳ ಬದಲಾಗಿ, ಒಳ್ಳೆಯ ಕೊಬ್ಬನ್ನು ಹೊಂದಿರುವ ಆವಕಾಡೊಗಳನ್ನು ಸೇವಿಸಿ. ನಿಮ್ಮ ಆಹಾರದಲ್ಲಿ ಬೀಜಗಳು, ಮೊಟ್ಟೆಗಳು ಮತ್ತು ಹಸಿರು ತರಕಾರಿಗಳಂತಹ ಆಹಾರಗಳನ್ನು ಸೇರಿಸಿ.

ಒಳ್ಳೆಯ ನಿದ್ರೆ

ನಿದ್ರೆ ಮತ್ತು ದೇಹದ ತೂಕದ ನಡುವೆ ಸಂಬಂಧವಿದೆ. ಸರಿಯಾಗಿ ನಿದ್ದೆ ಮಾಡದಿದ್ದರೆ ದೇಹದಲ್ಲಿ ಹಾರ್ಮೋನ್ ಅಸಮತೋಲನ ಉಂಟಾಗುತ್ತದೆ. ಈ ಕಾರಣದಿಂದಾಗಿ ನಿಮ್ಮ ತೂಕ ಹೆಚ್ಚಾಗುತ್ತದೆ. ಆದ್ದರಿಂದ ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನಿತ್ಯವೂ ಏಳೆಂಟು ಗಂಟೆಗಳ ಕಾಲ ಆರಾಮವಾಗಿ ನಿದ್ರೆ ಮಾಡುವುದು ಅವಶ್ಯಕ.

ಸಾಕಷ್ಟು ನೀರು

ಒಂದು ದಿನದಲ್ಲಿ ನೀವು ಖಂಡಿತವಾಗಿಯೂ ಎರಡರಿಂದ ಮೂರು ಲೀಟರ್ ನೀರನ್ನು ಕುಡಿಯಬೇಕು. ಕಷ್ಟಪಟ್ಟು ಕೆಲಸ ಮಾಡುವವರು ಮತ್ತು ಹೆಚ್ಚು ಬೆವರು ಸುರಿಸುವವರು ಹೆಚ್ಚು ಕುಡಿಯಬೇಕಾಗಬಹುದು. ಸಾಕಷ್ಟು ನೀರು ಕುಡಿಯುವುದರಿಂದ ನಿಮ್ಮ ದೇಹದ ಚಯಾಪಚಯವು ಸರಾಗವಾಗಿ ನಡೆಯುತ್ತದೆ. ಇದು ನಿಮ್ಮ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.

ಒತ್ತಡಕ್ಕೆ ಗುಡ್​ಬೈ ಹೇಳಿ

ನಿಮಗೆ ಬೇಡವಾದ ಎಲ್ಲ ವಿಷಯಗಳ ಬಗ್ಗೆ ಯೋಚಿಸುವ ಮೂಲಕ ನಿಮ್ಮನ್ನು ಒತ್ತಡಕ್ಕೆ ಒಳಪಡಿಸಕೊಳ್ಳಬೇಡಿ. ಕೆಲವರು ಒತ್ತಡದ ಕಾರಣದಿಂದ ಹೆಚ್ಚು ತಿನ್ನುತ್ತಾರೆ. ಅದರಿಂದ ಅವರ ತೂಕ ಹೆಚ್ಚಾಗುತ್ತದೆ. ಹೀಗಾಗಿ ಶಾಂತವಾಗಿರಿ ಮತ್ತು ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಭಾವನೆ ಬೆಳೆಸಿಕೊಳ್ಳಿ.

ವ್ಯಾಯಾಮ

ನಿಮ್ಮ ದೇಹವನ್ನು ದೈಹಿಕವಾಗಿ ಕ್ರಿಯಾಶೀಲವಾಗಿರಿಸಿಕೊಳ್ಳಿ. ದಿನಕ್ಕೆ ಕನಿಷ್ಠ 30 ರಿಂದ 40 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ವಿಶೇಷವಾಗಿ ಹೊಟ್ಟೆಯನ್ನು ಕಡಿಮೆ ಮಾಡುವ ವ್ಯಾಯಾಮಗಳ ಮೇಲೆ ಕೇಂದ್ರೀಕರಿಸಿ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net