

ಉತ್ತರ ಕನ್ನಡ: ದಾಂಡೇಲಿಯ ಕೋಗಿಲಬನ ಗ್ರಾಮದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಮೊಸಳೆ ಪ್ರತ್ಯಕ್ಷವಾಗಿದೆ. ಕಾಳಿ ನದಿಯಿಂದ ಹೊರಬಂದ ಮೊಸಳೆ ಈ ಗ್ರಾಮದ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆ ಕಾಲ ಸಂಚರಿಸಿ ಸ್ಥಳೀಯರಲ್ಲಿ ಆತಂಕ ಉಟ್ಟಿಸಿತ್ತು.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಯು ಮೊಸಳೆಯನ್ನ ಮತ್ತೆ ನದಿಗೆ ಸೇರಿಸಿದರು. ಸಮೀಪದ ಕಾಳಿ ನದಿಯಲ್ಲಿ ಮೊಸಳೆ ಪಾರ್ಕ್ ಇದ್ದು, ಇಲ್ಲಿ ನೂರಾರು ಮೊಸಳೆಗಳಿವೆ. ಆದರೆ, ಜನವಸತಿ ಪ್ರದೇಶಕ್ಕೆ ಮೊಸಳೆ ನುಗ್ಗಿದ್ದು ಇದೇ ಮೊದಲು.