ಎರಡು ಕರುಗಳಿಗೆ ಜನ್ಮ ನೀಡಿದ ಹಸು

ಎರಡು ಕರುಗಳಿಗೆ ಜನ್ಮ ನೀಡಿದ ಹಸು
Published on

ಬೈಲಕುಪ್ಪೆ: ಇಲ್ಲಿನ ದೊಡ್ಡಹರವೆ ಗ್ರಾಮದ ರಂಗಸ್ವಾಮಿ ಎಂಬುವವರ ಎಚ್‌ಎಫ್ ತಳಿಯ ಹಸು ಇತ್ತೀಚೆಗೆ ಎರಡು ಹೆಣ್ಣು ಕರುಗಳಿಗೆ ಜನ್ಮ ನೀಡಿದ್ದು, ಹಸು ಹಾಗೂ ಕರುಗಳು ಆರೋಗ್ಯವಾಗಿವೆ.

ಹುಣಸವಾಡಿ ಪಶುವೈದ್ಯಾಧಿಕಾರಿ ರವಿ ಕುಮಾರ್ ಪರಿಶೀಲನೆ ನಡೆಸಿ, ಇಲಾಖೆಯಿಂದ ಹಸುವಿಗೆ ಟಾನಿಕ್ ಹಾಗೂ ಪ್ರೋಟೀನ್ ಪೌಡರ್ ಒದಗಿಸಿದ್ದಾರೆ. ಕರುಗಳಿಗೆ ಹಾಲುಣಿಸಿ ಬೆಳಗ್ಗೆ 5, ಸಂಜೆ 4 ಲೀಟರ್ ಹಾಲನ್ನು ಡೇರಿಗೆ ಹಾಕುತ್ತಿರುವುದಾಗಿ ರಂಗಸ್ವಾಮಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net