15 ಕೆಜಿ ಟೊಮ್ಯಾಟೊ ಬೆಲೆ ಕೇವಲ 2 ರೂಪಾಯಿ! ದರ ಕುಸಿತಕ್ಕೆ ಕಂಗಾಲಾದ ರೈತರು

tomato
Published on

ಕೋಲಾರ: ಕರೊನಾ ಲಾಕ್​ಡೌನ್ ಹಿನ್ನೆಲೆ ರೈತರ ಬದುಕು ಮೂರಾಬಟ್ಟೆಯಾಗಿದೆ ಎಂಬುದಕ್ಕೆ ಇದಕ್ಕಿಂತ ಜ್ವಲಂತ ನಿದರ್ಶನ ಬೇಕಿಲ್ಲ. 15 ಕೆಜಿ ಟೊಮ್ಯಾಟೊ ಬೆಲೆ ಕೇವಲ 2 ರೂಪಾಯಿ! ದರ ಕುಸಿತಕ್ಕೆ ಕಂಗಾಲಾದ ಬೆಳೆಗಾರರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ವಡ್ಡಹಳ್ಳಿಯ ಮಾರುಕಟ್ಟೆಗೆ ಇಂದು ಒಟ್ಟಾರೆ ತಲಾ 15 ಕೆಜೆ ತೂಕದ 30 ಸಾವಿರ ಟೊಮ್ಯಾಟೊ ಬಾಕ್ಸ್​ಗಳು ಬಂದಿದ್ದವು. ಇದರಲ್ಲಿ 5 ಸಾವಿರ ಬಾಕ್ಸ್​ಗಳು ತಲಾ 30 ರೂಪಾಯಿಗೆ ವ್ಯಾಪಾರ ಆಗಿದೆ. ಉಳಿದ 25 ಸಾವಿರ ಟೊಮ್ಯಾಟೊ ಬಾಕ್ಸ್​ಗಳಿಗೆ ತಲಾ 2 ರೂಪಾಯಿ ದರವನ್ನ ದಲ್ಲಾಳಿಗಳು ನಿಗದಿ ಮಾಡಿದರು. ಬೆಳೆ ಬೆಳೆದ ಖರ್ಚು-ವೆಚ್ಚ ಇರಲಿ ಇಂದು ಮಾರುಕಟ್ಟೆಗೆ ಬಂದ ಸಾರಿಗೆ ವೆಚ್ಚವೂ ದಕ್ಕಲಿಲ್ಲ. ಬೇಸರಗೊಂಡ ರೈತರು ರಸ್ತೆಬದಿ ಟೊಮ್ಯಾಟೊ ಸುರಿದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿರಿ ರೋಹಿಣಿ ಸಿಂಧೂರಿಯ ಇಡೀ ಕುಟುಂಬಕ್ಕೆ ಕರೊನಾ ಸೋಂಕು!

ಕೋಲಾರ ಜಿಲ್ಲೆಯ ರೈತನೊಬ್ಬ ಮೂರು ಲಕ್ಷ ರೂ. ಖರ್ಚು ಮಾಡಿ ಟೊಮ್ಯಾಟೊ ಬೆಳೆದಿದ್ದ ರೈತನೂ ಇಂದು ಬೆಳಗ್ಗೆ ಮಾರುಕಟ್ಟೆಗೆ ಟ್ರ್ಯಾಕ್ಟರ್​ನಲ್ಲಿ ಟೊಮ್ಯಾಟೊ ತಂದಿದ್ದರು. ತಲಾ ಒಂದು ಕೆಜಿ ಟೊಮ್ಯಾಟೊಗೆ 75 ಪೈಸೆ ಹಣವೂ ಸಿಗದಿದ್ದಕ್ಕೆ ಮನನೊಂದ ರೈತ ಕಣ್ಣೀರು ಸುರಿಸುತ್ತಲೇ ಫಸಲನ್ನು ರಸ್ತೆಬದಿ ಸುರಿದು ಆಕ್ರೋಶ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net