ರಾಜ್ಯದಲ್ಲಿ ಕರೊನಾ ಕಂಟ್ರೋಲ್ ತಪ್ಪಿದೆ, ಕೈಮುಗಿಯುವೆ ಮನೆಯಿಂದ ಯಾರೂ ಹೊರ ಬರಬೇಡಿ: ಯಡಿಯೂರಪ್ಪ

bsy-corona
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಕಂಟ್ರೋಲ್​ ತಪ್ಪಿದೆ. ಒಂದು ಮನೆಯಲ್ಲಿ ಮೂರ್ನಾಲ್ಕು ಜನರಿಗೆ ಕರೊನಾ ಪಾಸಿಟಿವ್​ ಬರುತ್ತಿದೆ. ಇದನ್ನು ನಿಯಂತ್ರಣ ಮಾಡುವ ಸ್ಥಿತಿ ಬಂದೊದಗಿದೆ. ಕೈಜೋಡಿಸಿ ಪ್ರಾರ್ಥನೆ ಮಾಡುವೆ. ದಯವಿಟ್ಟು ಮನೆಯಿಂದ ಯಾರೂ ಅನಗತ್ಯವಾಗಿ ಹೊರ ಬರಬೇಡಿ. ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಬಿಟ್ಟರೆ ಬೇರೆ ಪರಿಹಾರವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹೇಳಿದರು.

ಕರೊನಾ ಸೋಂಕು ತಗುಲಿ ಮಣಿಪಾಲ್​ ಆಸ್ಪತ್ರೆಗೆ ದಾಖಲಾಗಿದ್ದ ಸಿಎಂ ಸದ್ಯ ಚೇತರಿಸಿಕೊಂಡಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದರು. ಈ ವೇಳೆ ಮಾತನಾಡಿದ ಯಡಿಯೂರಪ್ಪ, ನಾನು ಆರೋಗ್ಯವಾಗಿ ಬಂದಿದ್ದೇನೆ. ಸದ್ಯ ರೆಸ್ಟ್ ಮಾಡಲಲ್. ಇಂದು ಸಂಜೆ ಸಚಿವರ ಸಭೆ ಕರೆದಿದ್ದೇನೆ. ಜನರ ಅನಗತ್ಯ ಓಡಾಟದಿಂದ ಕರೊನಾ ಹೆಚ್ಚಾಗ್ತಿದೆ. ಕಂಟ್ರೋಲ್ ಮಾಡಲು ಆಗದ ಪರಿಸ್ಥಿತಿಯನ್ನ ತಲುಪಿದ್ದೇವೆ. ಮಾಸ್ಕ್ ಹಾಕಿಲ್ಲ ಅಂತಾ ಹಾಕಿಲ್ಲ ಅಂತ ದಂಡ ಹಾಕಲು ಪೊಲೀಸರಿಗೆ ಅವಕಾಶ ಮಾಡಿಕೊಡಬೇಡಿ ಎಂದರು. ಇದನ್ನೂ ಓದಿರಿ ಕೋವಿಡ್​ಗೆ ಸಿಪಿಐ ಮುಖಂಡ ಸೀತಾರಾಮ್​ ಯೆಚೂರಿ ಹಿರಿಯ ಪುತ್ರ ಬಲಿ

ಪ್ರಧಾನ ಮಂತ್ರಿ ಹೇಳಿದ ಹಾಗೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಜಿಲ್ಲೆಗಳಲ್ಲಿ ಕರೊನಾ ತಡೆಯಲು ಏನೇನು ಕ್ರಮ ಕೈಗೊಳ್ಳಬೇಕು ಎಂಬುದನ್ನ ಸೂಚನೆ‌ ನೀಡುತ್ತಿದ್ದೇವೆ. ನಾನು ಆಸ್ಪತ್ರೆಯಲ್ಲಿದ್ದಾಗಲೂ ನಿರಂತರವಾಗಿ ಕಾರ್ಯದರ್ಶಿ ಮತ್ತು ಸಚಿವರ ಜತೆ ಕರೊನಾ ಪರಿಸ್ಥಿತಿ ನಿಭಾಯಿಸುವ ಕುರಿತು ಮಾತುಕತೆ ನಡೆಸುತ್ತಿದ್ದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net