ಆಕ್ಸಿಜನ್​ ಸೋರಿಕೆ: ಕೋವಿಡ್​ ವಾರ್ಡ್​ನಲ್ಲಿ 22 ಮಂದಿ ದುರಂತ ಸಾವು

oxygen leakage in Nashik hospital
Published on

ಮುಂಬೈ: ಮಹಾರಾಷ್ಟ್ರದ ನಾಸಿಕ್​ನ ಡಾ.ಜಾಕೀರ್​ ಹುಸೇನ್​ ಆಸ್ಪತ್ರೆಯಲ್ಲಿ ಆಕ್ಸಿಜನ್​ ಸೋರಿಕೆಯಾಗಿ 22 ಮಂದಿ ದುರ್ಮರಣಕ್ಕೀಡಾದ ಘಟನೆ ಬುಧವಾರ ಸಂಭವಿಸಿದೆ.

ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕರ್ ಸೋರಿಕೆಯಾಗಿದ್ದು, ಕೋವಿಡ್​ ಸೋಂಕಿತರಿಗೆ ಆಕ್ಸಿಜನ್​ ಸಿಕ್ಕಿಲ್ಲ. ಪ್ರಾಣ ಉಳಿಸಬೇಕಿದ್ದ ವಾಯು ಯಮನಂತೆ ಬಂದೆರಗಿದೆ. ಆರಂಭದಲ್ಲಿ 11 ಮಂದಿ ಮೃತಪಟ್ಟಿದ್ದಾಗಿ ತಿಳಿದು ಬಂದಿದ್ದು, ಸದ್ಯ ಸಾವಿನ ಸಂಖ್ಯೆ 22ಕ್ಕೇರಿದೆ. ಆಕ್ಸಿಜನ್​ ಸೋರಿಕೆ ನಿಯಂತ್ರಣ ಕಾರ್ಯಾಚರಣೆ ನಡೆದಿದೆ.

ಆಕ್ಸಿಜನ್ ಸೋರಿಕೆ ಪ್ರಕರಣವನ್ನು ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿದೆ. ಆಸ್ಪತ್ರೆಯಲ್ಲಿ 171 ಮಂದಿ ಕೋವಿಡ್​ ಸೋಂಕಿತರಿದ್ದರು. ಈ ಪೈಕಿ 67 ಮಂದಿ ಕೃತಕ ಆಕ್ಸಿಜನ್​ ಪಡೆಯುತ್ತಿದ್ದರು. ಇವರಲ್ಲಿ 22 ಮಂದಿ ದುರಂತ ಅಂತ್ಯ ಕಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net