ರಾಜ್ಯದಲ್ಲಿ ಕಂಪ್ಲೀಟ್​ ಲಾಕ್​ಡೌನ್​ ಜಾರಿ ಆಗುತ್ತಾ? ಸಚಿವ ಡಾ.ಸುಧಾಕರ್​ ಹೇಳಿದ್ದೇನು?

sudhakar
Published on

ಕಲಬುರಗಿ: ಕೋವಿಡ್​ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಾಂತ ಜನತಾ ಕರ್ಫ್ಯೂ ಜಾರಿಯಾಗಿದ್ದು, ಇಡೀ ರಾಜ್ಯ ಸ್ತಬ್ಧಗೊಂಡಂತೆ ಭಾಸವಾಗುತ್ತಿದೆ. ಸಾರಿಗೆ ಸಂಚಾರ ಬಂದ್​ ಆಗಿದ್ದು, ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್​ ಹಾಕಿ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಆದರೂ ಕರೊನಾದಿಂದಾಗುತ್ತಿರುವ ಸಾವು-ನೋವಿನ ಪ್ರಮಾಣವೇನೂ ಕಡಿಮೆ ಆಗಿಲ್ಲ. ದಿನದದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕರೊನಾ ಸೋಂಕಿನ ಚೈನ್​ ಲಿಂಕ್​ ಕತ್ತರಿಸಲು ಕಂಪ್ಲೀಟ್​ ಲಾಕ್​ಡೌನ್​ ಒಂದೇ ಕೊನೆಯ ಅಸ್ತ್ರ ಎಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎಂದು ಮೂಲಗಳುಇ ತಿಳಿಸಿವೆ.

ಹಾಗಾಗಿ ಮೇ ಮೊದಲ ವಾರದಿಂದಲೇ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಲಾಕ್​ಡೌನ್​ ಜಾರಿ ಮಾಡಲಾಗುತ್ತೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಕುರಿತು ಕಲಬುರಗಿಯಲ್ಲಿ ಶನಿವಾರ ಬೆಳಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಜನತಾ ಕರ್ಫ್ಯೂ ವಿಸ್ತರಣೆಯ ಸುಳಿವು ನೀಡಿದ್ದಾರೆ.

ಜನತಾ ಕರ್ಫ್ಯೂ ನಂತರವೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್​, ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡುವ ಪ್ರಸ್ತಾವನೆ ಇಲ್ಲ. ಮಹಾರಾಷ್ಟ್ರ‌ದಲ್ಲಿ 44 ದಿನಗಳಿಂದ ಲಾಕ್​ಡೌನ್ ಜಾರಿಯಲ್ಲಿದೆ. ಈಗ ನಿಧಾನವಾಗಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು. ಜನತಾ ಕರ್ಫ್ಯೂನ 14 ದಿನಗಳ ಕಾಲಾವಧಿ ಮುಗಿದ ಬಳಿಕ ಮುಂದಿನ ನಡೆ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net