ಸಿಎಂ ಉದಾಸಿ ಆರೋಗ್ಯ ಸ್ಥಿತಿ ಗಂಭೀರ! ಜಾಲತಾಣದಲ್ಲಿ ಹರಿದಾಡುತ್ತಿದೆ ನಿಧನ ಸುದ್ದಿ, ಮಗ ಹೇಳಿದ್ದೇನು?

CM-Udasi
Published on

ಬೆಂಗಳೂರು: ಹಾನಗಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿಎಂ ಉದಾಸಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

77 ವರ್ಷದ ಸಿಎಂ ಉದಾಸಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ನಾರಾಯಣ ಹೆಲ್ತ್​ ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ.

ಇದರ ಬೆನ್ನಲ್ಲೇ ಸಿಎಂ ಉದಾಸಿ ಅವರ ಪುತ್ರ, ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿ, 'ತಂದೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ನಿರಂತರ ವೈದ್ಯರ ಆರೈಕೆಯಲ್ಲಿರುವ ನನ್ನ ತಂದೆಯ ಆರೋಗ್ಯ ಸುಧಾರಣೆಗಾಗಿ ನಮ್ಮೆಲ್ಲರ ಪ್ರಾರ್ಥನೆ ಅವಶ್ಯಕ' ಟ್ವೀಟ್​ ಮಾಡಿದ್ದಾರೆ.

ಈ ನಡುವೆ ಸಿಎಂ ಉದಾಸಿ ನಿನ್ನೆಯೇ ನಿಧನ ಹೊಂದಿದ್ದಾರೆ. ಸಿಎಂ ಉದಾಸಿ ಅವರ ಪತ್ನಿಯ ಆರೋಗ್ಯ ಸರಿ ಇಲ್ಲದ ಕಾರಣ ಕುಟುಂಬಸ್ಥರು ನಿಧನದ ಸುದ್ದಿಯನ್ನ ಅಧಿಕೃತವಾಗಿ ಹೇಳಿಲ್ಲ ಎಂಬ ಸುದ್ದಿಯೂ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net