

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರು ರಾಜಭವನದತ್ತ ತೆರಳಿದ್ದು, ಇನ್ನು ಕೆಲವೇ ಕ್ಷಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಇಂದಿಗೆ(ಜು.26) 2 ವರ್ಷ. ಈ ಹಿನ್ನೆಲೆ ಹಮ್ಮಿಕೊಂಡಿದ್ದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಬಿಎಸ್ವೈ, ಭಾಷಣದ ಆರಂಭದಿಂದಲೂ ಭಾವುಕರಾಗಿಯೇ ಮಾತನಾಡಿದರು. ಅಂತಿಮವಾಗಿ ಕಣ್ಣೀರು ಹಾಕುತ್ತಲೇ 'ಎಲ್ಲರೊಂದಿಗೂ ಊಟ ಮಾಡಿದ ಮೇಲೆ ರಾಜಭವನಕ್ಕೆ ಹೋಗಿ ರಾಜೀನಾಮೆ' ಕೊಡುವೆ ಎಂದರು. ಇನ್ನು ರಾಜ್ಯಪಾಲರನ್ನು ಬಿಎಸ್ವೈ ಭೇಟಿಗೆ ಇಂದು ಸಂಜೆ 4ಕ್ಕೆ ಸಮಯ ನಿಗದಿಯಾಗಿದೆ ಎಂದು ಗೊತ್ತಾಗಿದೆ.