ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದವರಿಗೆ ಶಾಕ್​! ಪಟ್ಟಿಯಲ್ಲಿ ವಿಜಯೇಂದ್ರ ಹೆಸರೂ ಇಲ್ಲ

bommai bsy
Published on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಯಾರೆಗೆಲ್ಲ ಮಂತ್ರಿಗಿರಿ ಸಿಕ್ಕಿದೆ ಗೊತ್ತಾ? ಐವರು ಹೊಸ ಮುಖಗಳಿಗೆ ಈ ಭಾರಿ ಸಚಿವ ಸ್ಥಾನ ಸಿಕ್ಕಿದ್ದು, ಇಂದು ಒಟ್ಟು 29 ಮಂದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನು ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದಿದ್ದ ಸಿ.ಪಿ.ಯೋಗೇಶ್ವರ್​, ಅರವಿಂದ್ ಬೆಲ್ಲದ, ಯತ್ನಾಳ್​ಗೆ ಮಂತ್ರಿ ಸ್ಥಾನ ಕೈತ್ತಪ್ಪಿದೆ.

ಇಂದು ಬೆಳಗ್ಗೆ 11.20 ರ ಸುಮಾರಿಗೆ ಸುದ್ದಿಗೋಷ್ಠಿ ನಡೆಸಿದ ಸಿಎಂ ಬೊಮ್ಮಾಯಿ, ಈ ಭಾರಿ ಡಿಸಿಎಂ ಸ್ಥಾನ ಇರಲ್ಲ. ಸಚಿವ ಸಂಪುಟ ರಚನೆಯಲ್ಲಿ ಅನುಭವ ಹೊಸ ಶಕ್ತಿಯ ಸಮ್ಮಿಶ್ರ ಇದೆ. ಬಿಜೆಪಿ ರಾಷ್ಟ್ರೀಯ ಪಕ್ಷ. ನರೇಂದ್ರ ಮೋದಿ ಅವರ ನಾಯಕತ್ವ ಇದೆ, ಅಮಿತ್​ ಷಾ ಅವರ ಮಾರ್ಗದರ್ಶನ ಇದೆ, ನಡ್ಡಾಜಿ ಅವರ ಚತುರತೆ ಇದೆ. ಜತೆಗೆ ಯಡಿಯೂರಪ್ಪ ಅವರ ಶಕ್ತಿ ಇದೆ. ಇಂದು 29 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. 7 ಮಂದಿ ವಕ್ಕಲಿಗ, 8 ಮಂದಿ ಲಿಂಗಾಯತ, 3 ಎಸ್ಸಿ, ತಲಾ 1 ರೆಡ್ಡಿ, ಮಹಿಳೆ, ಎಸ್ಟಿ ಸಮುದಾಯಕ್ಕೆ ಸಚಿವ ಸ್ಥಾನ ಕೊಡಲಾಗಿದೆ. ಜನಪರ ಆಡಳಿತ ಕೊಡುವ ಹಿನ್ನೆಲೆ, ಬರುವ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಸಂಪುಟ ರಚನೆ ಆಗಿದೆ ಎಂದರು. ಇನ್ನು ಮಾಜಿ ಸಿಎಂ ಪುತ್ರ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಕೊಟ್ಟಿಲ್ಲ ಎಂದರು.

ಸಂಪುಟ ರಚನೆ ಸಂಬಂಧ ನಮ್ಮ ವರಿಷ್ಠರು ಹಲವಾರು ವಿಚಾರ ತೆಗೆದುಕೊಂಡು, ಹಲವು ಸುತ್ತಲ್ಲಿ ಸಭೆ ಮಾಡಿದ್ದಾರೆ. ಇಲ್ಲಿ ಒತ್ತಡ ಬರಲ್ಲ. ವಿಜಯೇಂದ್ರ ವಿಚಾರವಾಗಿ ವರಿಷ್ಠರು ಬಿಎಸ್​ವೈ ಜತೆ ಮಾತನಾಡಿದ್ದಾರೆ. ವಿಜಯೇಂದ್ರ ಜತೆ ಅರುಣ್ ಸಿಂಗ್ ಮಾತನಾಡಿದ್ದಾರೆ. ನಾನು ರಾಜ್ಯಪಾಲರಿಗೆ ಕಳಿಸಿದ ಪಟ್ಟಿಯಲ್ಲಿ ವಿಜಯೇಂದ್ರ ಹೆಸರಿಲ್ಲ. ಹಂತಹಂತವಾಗಿ ಸಂಪುಟ ವಿಸ್ತರಣೆ ಆಗುತ್ತದೆ. ಸರ್ಕಾರದಲ್ಲಿದ್ದ ಕೆಲವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ಪಕ್ಷ ಬಯಸಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net