ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ... ಹೆರಿಗೆಯಾದ 24 ದಿನಕ್ಕೆ ಕರೊನಾಗೆ ಬಾಣಂತಿ ಬಲಿ!

death case
Published on

ಕೊಪ್ಪಳ: ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ… ಏನೂ ಅರಿಯದ ಕಂದಮ್ಮನ ತಬ್ಬಲಿ ಮಾಡಿಬಿಟ್ಟೆಯಲ್ಲ ಎಂದು ಪದೇಪದೆ ಹಿಡಿಶಾಪ ಹಾಕಬೇಕೆನ್ನಿಸುತ್ತೆ ಈ ಕರುಣಾಜನಕ ಸ್ಟೋರಿ ಕೇಳಿದ್ರೆ…

ಕೊಪ್ಪಳ ತಾಲೂಕು ಗುಳದಳ್ಳಿ ಗ್ರಾಮದ ನಿರ್ಮಲಾ ವೀರಯ್ಯ ಅವರಿಗೆ ಹೆರಿಗೆಯಾಗಿ 23 ದಿನ ಆಗಿತ್ತಷ್ಟೆ. 24ನೇ ದಿನಕ್ಕೇ ಮಹಾಮಾರಿ ಕರೊನಾಗೆ ಬಾಣಂತಿ ನಿರ್ಮಲಾ ಬಲಿಯಾಗಿದ್ದು, ಹಸುಗೂಸು ತಾಯಿ ಇಲ್ಲದೆ ತಬ್ಬಲಿ ಆಗಿದೆ.

ನಿರ್ಮಲಾಗೆ ಹೆರಿಗೆ ಆದ ಬಳಿಕ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net