ಬೊಲೆರೊ ರೂಪದಲ್ಲಿ ಬಂದ ಜವರಾಯ... ಮನೆಯ ಕಲ್ಲುಚಪ್ಪಡಿ ಬೀಳಿಸಿ ವೃದ್ಧೆಯ ಪ್ರಾಣ ಹೊತ್ತೊಯ್ದ

death
Published on

ಚಿಂತಾಮಣಿ: ಬೊಲೆರೊ ರೂಪದಲ್ಲಿ ಬಂದ ಜವರಾಯ, ಕಲ್ಲುಚಪ್ಪಡಿ ಬೀಳಿಸಿ ಮನೆ ಮುಂದೆ ಕುಳಿತ್ತಿದ್ದ ವೃದ್ಧೆಯ ಪ್ರಾಣ ತೆಗೆದಿದ್ದಾನೆ.

ಇಂತಹ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯ ರಂಪತಟ್ಟಿ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ವೆಂಕಟಮ್ಮ(65)ಮೃತೆ.

ಬುಧವಾರ ಬೆಳಗ್ಗೆ ಬೊಲೆರೊ ವಾಹನ ಗ್ರಾಮದ ಕಿರಿದಾದ ರಸ್ತೆಯಲ್ಲಿ ಚಲಿಸುವಾಗ ವಾಹನದ ಕಬ್ಬಿಣ ಹ್ಯಾಂಗಲ್​ ಮನೆ ಛಾವಣಿಯ ಚಪ್ಪಡಿಗೆ ತಾಗಿ ಚಪ್ಪಡಿ ಮುರಿದು ಕೆಳಗೆ ಬಿದ್ದಿದೆ. ಈ ವೇಳೆ ಕೆಳಗೆ ಕುಳಿತ್ತಿದ್ದ ವೆಂಕಟಮ್ಮರ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ವಾಹನ ಚಾಲಕ ಪರಾರಿಯಾಗಿದ್ದು, ಕೆಂಚಾರ್ಲಹಳ್ಳಿ ಪಿಎಸ್​ಐ ನಾರಾಯಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net