ಮೋಸ ಹೋಗಿ ಪೊಲೀಸ್​ ಠಾಣೆ ಮೇಟ್ಟಿಲೇರಿದ ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ!

nikki galrani
Published on

ಬೆಂಗಳೂರು: ಬಹುಭಾಷಾ ನಟಿ ಸಂಜನಾ ಗಲ್ರಾನಿಯ ಸಹೋದರಿ ನಿಕ್ಕಿ ಗಲ್ರಾನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಸೌತ್ ಸಿನಿರಂಗದ ಖ್ಯಾತ ನಟಿ ನಿಕ್ಕಿ ಗಲ್ರಾನಿ, ಬೆಂಗಳೂರಿನ ಕೋರಮಂಗಲದಲ್ಲಿರುವ ಸ್ಮಾಲಿಸ್ ರೆಸ್ಟೊ ಕೆಫೆ ಮಾಲೀಕ ನಿಖಿಲ್ ಹೆಗ್ಡೆ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿರಿ ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಉಲ್ಟಾ ಹೊಡೆದ ಯುವತಿ

ನಿಕ್ಕಿ ಗಲ್ರಾನಿ ಸ್ಮಾಲಿಸ್ ರೆಸ್ಟೊ ಕೆಫೆಯಲ್ಲಿ ಬರೋಬ್ಬರಿ ಐವತ್ತು ಲಕ್ಷ ರೂಪಾಯಿ ಬಂಡವಾಳ ಹೂಡಿದ್ದರು. ಆದರೆ ಲಾಭವನ್ನೂ ಕೊಡದೆ, ಇತ್ತ ಹೂಡಿಕೆ ಮಾಡಿದ ಹಣವನ್ನೂ ಹಿಂತಿರುಗಿಸದೆ ನಿಖಿಲ್ ಹೆಗ್ಡೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ನಿಕ್ಕಿ ಗಲ್ರಾನಿ ದೂರು ನೀಡಿದ್ದಾರೆ.

2016ರ ಡಿಸೆಂಬರ್​ನಲ್ಲಿ 50 ಲಕ್ಷ ರೂಪಾಯಿಯನ್ನ ಹೂಡಿಕೆ ಮಾಡಿದ್ದ ನಟಿಗೆ ಪ್ರತಿ ತಿಂಗಳು ಲಾಭವಾಗಿ ಒಂದು ಲಕ್ಷ ರೂ. ನೀಡುವುದಾಗಿ ನಿಖಿಲ್ ಹೆಗ್ಡೆ ಹೇಳಿದ್ದನಂತೆ. ಅದರಂತೆ ನಿಕ್ಕಿ ಗಲ್ರಾನಿ, ಪೋಷಕರ ಸಮ್ಮುಖದಲ್ಲಿ ನಿಖಿಲ್ ಹೆಗ್ಡೆ ಜತೆ ಹಣ ಹೂಡಿಕೆ ಬಗ್ಗೆ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಅಮೃತಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net