

ರಾಮನಗರ: ಸಚಿವ ಸಿ.ಪಿ. ಯೋಗೇಶ್ವರ್ಗೆ ಸ್ವಕ್ಷೇತ್ರದಲ್ಲೇ ಭಾರಿ ಮುಖಭಂಗ ಆಗಿದೆ. ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳೇ ಇಲ್ಲ.
ರಾಮನಗರ-ಚನ್ನಪಟ್ಟಣ ನಗರಸಭೆ ಚುನಾವಣೆಗೆ ಏ.27ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಏ.15ರಂದು ಕೊನೆಯ ದಿನವಾಗಿತ್ತು. ಎರಡೂ ಕಡೆಗಳಿಂದ ಒಟ್ಟು 62 ವಾರ್ಡ್ಗೆ ಎಲೆಕ್ಷನ್ ನಡೆಯುತ್ತಿದೆ. ಎರಡೂ ಕಡೆ ಹಲವು ವಾರ್ಡ್ನ ಚುನಾವಣಾ ಕಣದಲ್ಲಿ ಬಿಜೆಪಿ ಅಭ್ಯರ್ಥಿಗಳೇ ಇಲ್ಲ.
ಸಚಿವ ಸಿ.ಪಿ.ಯೋಗೇಶ್ವರ್ ತವರು ಕ್ಷೇತ್ರ ಚನ್ನಪಟ್ಟಣದಲ್ಲಿಯೇ ನಗರಸಭೆಯ 8 ವಾರ್ಡ್ನಲ್ಲಿ ಬಿಜೆಪಿ ಅಭ್ಯರ್ಥಿಗಳೇ ಇಲ್ಲ. ರಾಮನಗರ 31, ಚನ್ನಪಟ್ಟಣ 31 ವಾರ್ಡ್ಗಳ ಪೈಕಿ ಜೆಡಿಎಸ್ನ ಎಲ್ಲ ವಾರ್ಡ್ನಲ್ಲಿಯೂ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ಕಾಂಗ್ರೆಸ್ ಸಹ ಎಲ್ಲ ವಾರ್ಡ್ನಲ್ಲೂ ಪಕ್ಷದ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ.
ರಾಮನಗರ-ಚನ್ನಪಟ್ಟಣದಲ್ಲಿ ಬಿಜೆಪಿ ಕಡೆಯಿಂದ ಹಲವು ವಾರ್ಡ್ಗಳಿಗೆ ಅಭ್ಯರ್ಥಿಗಳೇ ಇಲ್ಲ. ಇದರಿಂದ ಬಿಜೆಪಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ.