ಕಳೆದ ವಾರ ನಾಪತ್ತೆಯಾಗಿದ್ದ ಯುವಕ ಸ್ಮಶಾನದಲ್ಲಿ ಶವವಾಗಿ ನೇತಾಡುತ್ತಿದ್ದ!

New Project(1)
Published on

ಶಿವಮೊಗ್ಗ: ಕಳೆದ ವಾರ ಮನೆಯಿಂದ ನಾಪತ್ತೆಯಾಗಿದ್ದ ಯುವಕನೊಬ್ಬ ಸ್ಮಶಾನದಲ್ಲಿ ನೇಣುಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ನಡೆದಿದೆ.

ಚನ್ನಗಿರಿ ತಾಲೂಕಿನ ಕಾಗತ್ತೂರು ಗ್ರಾಮದ ಎಂ.ಕೆ.ಸ್ವಾಮಿ(27) ಮೃತ. ಆಗುಂಬೆ ಗ್ರಾಮದ ಸ್ಮಶಾನದ ಶೆಡ್​ನಲ್ಲಿ ನೇಣಿಗೆ ಶರಣಾಗಿದ್ದಾನೆ. ಮೇ 24ರಂದು ಸ್ವಾಮಿ ನಾಪತ್ತೆಯಾಗಿದ್ದ. ಈತನಿಗೆ ಇನ್ನೂ ಮದುವೆ ಆಗಿರಲಿಲ್ಲ. ಮಗ ಕಾಣೆಯಾದ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಯುವಕನ ಮೊಬೈಲ್ ನೆಟ್​ವರ್ಕ್​ ಆಧರಿಸಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಸ್ಮಶಾನದಲ್ಲಿ ಡೆತ್​ನೋಟ್​ ಬರೆದಿಟ್ಟು ದುರಂತ ಅಂತ್ಯಕಂಡಿದ್ದಾನೆ. 'ಅಪ್ಪ.. ಅಣ್ಣ.. ನನ್ನನ್ನು ಕ್ಷಮಿಸಿ' ಎಂದು ಸ್ವಾಮಿಯ ಡೆತ್​ನೋಟ್​ನಲ್ಲಿದೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net