ಪಕ್ಕದೂರಲ್ಲಿ 22 ವರ್ಷದ ಯುವತಿ ಸಾವು! ಶವದ ಪಕ್ಕದಲ್ಲೇ ಇತ್ತು ಆಸಿಡ್​, ಚಾಕು...

death
Published on

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಹೊಸೂರು ತಾಂಡಾ ಗ್ರಾಮದ ಬಳಿ 22 ವರ್ಷದ ಯುವತಿ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದು, ಮೃತದೇಹದ ಬಳಿ ಚಾಕು ಮತ್ತು ಆಸಿಡ್​ ಬಾಟಲಿ ಸಿಕ್ಕಿದೆ.

ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮದ ಮಾನಸ(22) ಮೃತ ದುರ್ದೈವಿ. ಚಳ್ಳಕೆರೆಯ ಅಂಚೆ ಕಚೇರಿಯಲ್ಲಿ ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್ ಆಗಿದ್ದಳು.

ಹೊಸೂರು ತಾಂಡಾ ಗ್ರಾಮದಲ್ಲಿ ಮಾನಸ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸ್​ ತನಿಖೆ ಬಳಿಕ ಬಯಲಾಗಲಿದೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net