ಬಿಗ್​ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಆತ್ಮಹತ್ಯೆಗೆ ಯತ್ನ!

chaitra koturu
Published on

ಕೋಲಾರ: ಬಿಗ್​ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಇಂದು ಬೆಳಗಿನಜಾವ ವಿಷಸೇವಿಸಿ ಆತ್ಮಹತ್ಯೆ ಯತ್ನಿಸಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾ.27ರಂದು ಪ್ರಿಯಕರ ನಾಗಾರ್ಜುನ್ ಜತೆ ಚೈತ್ರಾ ಕೋಟೂರ್ ದುವೆಯಾಗಿದ್ದರು. ಅಂದು ಸಂಜೆಯೇ ಪತ್ನಿ ವಿರುದ್ಧ ಪತಿ ಪೊಲೀಸ್​ ಠಾಣೆ ಮೆಟ್ಟಿಲೇರುವ ಮೂಲಕ ನವಜೋಡಿ ಮದುವೆ ವಿವಾದ ಸ್ಫೋಟಗೊಂಡಿತ್ತು. ಮದುವೆ ಬಗ್ಗೆ ತಗಾದೆ ತೆಗೆದ ನಾಗಾರ್ಜುನ್ ಪೋಷಕರು ಮತ್ತು ಚೈತ್ರಾ ಕೋಟೂರ್ ಪೋಷಕರು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ನಾಗಾರ್ಜುನ್ ತನ್ನ ಪೋಷಕರೊಂದಿಗೆ ವಾಪಸ್​ ಆಗಿದ್ದರು. ನವವಧುವಾಗಿ ಕಂಗೊಳಿಸಬೇಕಿದ್ದ ಚೈತ್ರಾ ತನ್ನ ಪೋಷಕರೊಂದಿಗೆ ಕೋಲಾರದ ಮನೆಯಲ್ಲಿದ್ದರು. ಈ ಮಧ್ಯೆ ನಾಗಾರ್ಜುನ್​ ಮತ್ತು ಚೈತ್ರಾ ನಡುವಿನ ಪ್ರೀತಿ ಸಂಕೇತದ ಹಲವು‌ ವಿಡಿಯೋ ಮತ್ತು ಪೋಟೋಗಳನ್ನು ಚೈತ್ರಾ ಹಂಚಿಕೊಂಡಿದ್ದರು.

ಮದುವೆ ವಿವಾದದ ಹಿನ್ನೆಲೆ ‌ಮನನೊಂದ ಚೈತ್ರಾ ಕೋಲಾರದ ಕುರುಬರಪೇಟೆ ಮನೆಯಲ್ಲಿ ಚೈತ್ರಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net