ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಉಲ್ಟಾ ಹೊಡೆದ ಯುವತಿ

cd case
Published on

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ಗೆ ಸ್ಫೋಟಕ ತಿರುವು ಸಿಕ್ಕಿದ್ದು, ನ್ಯಾಯಾಲಯದಲ್ಲಿ ಸ್ವ-ಇಚ್ಛೆಯಿಂದ ಮರು ಹೇಳಿಕೆ ನೀಡುವುದಾಗಿ ಪೊಲೀಸರ ಮುಂದೆ ಸಿಡಿ ಲೇಡಿ ಹೇಳಿದ್ದಾಳೆ.

ನಾನು ಹೇಳುವುದು ತುಂಬಾ ಇದೆ. ನನ್ನ ಹೇಳಿಕೆ ಪರಿಗಣಿಸಿ ಎಂದು ಸಿಡಿ ಯುವತಿ ತನಿಖಾಧಿಕಾರಿ ಕವಿತಾಗೆ ಪತ್ರ ಬರೆದಿದ್ದಾಳೆ ಎಂದು ಗೊತ್ತಾಗಿದೆ. ಈ ಮೊದಲು ಸಿಡಿ ಲೇಡಿ ನೀಡಿದ್ದ ಹೇಳಿಕೆ ಪರಿಗಣಿಸದಂತೆ ಆಕೆಯ ಪೋಷಕರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಎಸ್ಐಟಿ ಅಧಿಕಾರಿಗಳಿಗೆ ಹೈಕೋರ್ಟ್ ನೋಟಿಸ್ ನೀಡಿತ್ತು.

ಸಿಡಿ ಕೇಸ್​ನ ಕಿಂಗ್​ಪಿನ್​ ನರೇಶ್​ಗೌಡ ಮತ್ತು ಹ್ಯಾಕರ್​ ಶ್ರವಣ್​ ವಿರುದ್ಧವೇ ಸಿಡಿ ಲೇಡಿ ಹೇಳಿಕೆ ಕೊಟ್ಟಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಸಿಡಿ ಲೇಡಿ ಮನವಿಯಂತೆ ಮರು ಹೇಳಿಕೆ ಕೊಡಲು ಅವಕಾಶ ಮಾಡಿಕೊಡುವಂತೆ ಎಸ್​ಐಟಿ ಅಧಿಕಾರಿಗಳು ಮ್ಯಾಜಿಸ್ಟ್ರೇಟರ ಅನುಮತಿಗಾಗಿ ಕಾಯುತ್ತಿದ್ದಾರೆ.

ನಾವು ಕೆಲದಿನಗಳಿಂದ ಸಿಡಿ ಕೇಸ್​ನ ಯುವತಿಯ ಸಂಪರ್ಕದಲ್ಲಿ ಇಲ್ಲ. ಆಕೆಯ ಗಟ್ಸ್​ ಮೆಚ್ಚಲೇ ಬೇಕು. ನಾನು ಯಾವುದೇ ಕಾರಣಕ್ಕೂ ವಾಪಸ್​ ಹೋಗಲ್ಲ. ಆಕೆಯ ಪರವಾಗಿ ವಕಾಲತ್ತು ಹಾಕಿದ್ದೇವೆ. ಈ ಬೆಳವಣಿಗೆ ಓಡಿ ನನಗೂ ಶಾಕ್​ ಆಗಿದೆ ಎಂದು ಯುವತಿ ಪರ ವಕೀಲ ಜಗದೀಶ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net