

ಹಾಸನ: ಸಾರಿಗೆ ನೌಕರರ ಮುಷ್ಕರ ತೀವ್ರಗೊಂಡಿದ್ದು, ನೌಕರರ ಕುಟುಂಬಸ್ಥರೂ ಬೀದಿಗಿಳಿದು ಹೋರಾಡುತ್ತಿದ್ದಾರೆ. ಮಹಿಳೆಯರು-ಮಕ್ಕಳು ತಟ್ಟೆ ಬಡಿಯುತ್ತ ಪ್ರತಿಭಟನೆಗೆ ಸಾಥ್ ನೀಡುತ್ತಿದ್ದಾರೆ. ಈ ನಡುವೆ ಪ್ರತಿಭಟನಾನಿರತ ನೌಕರನೊಬ್ಬ ಹಾಸನ ನಗರ ಬಸ್ ನಿಲ್ದಾಣದಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಿರ್ವಾಹಕ ಕಂ ಚಾಲಕ ಪಾಲಾಕ್ಷ (40) ವಿಷ ಸೇವಿಸಿದವ. ಹಾಸನ-ಚಿಕ್ಕಮಗಳೂರು ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ಉಪಾಧ್ಯಕ್ಷರಾಗಿರುವ ಪಾಲಾಕ್ಷ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿಲಾಗಿದ್ದು, ನನ್ನ ಸಾವಿಗೆ ಅನಂತ ಸುಬ್ಬರಾಯ ಕಾರಣ. ಅವರಿಂದಲೇ ಕೆಎಸ್ಆರ್ಟಿಸಿ ನೌಕರರ ಮನೆ ಹಾಳಾಗಿದೆ ಎಂದು ಚೀರಾಡುತ್ತಿದ್ದರು. ತೀವ್ರ ಅಸ್ವಸ್ಥಗೊಂಡಿರುವ ಪಾಲಾಕ್ಷ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.