ಪ್ರೀತಿ ಬಲೆಗೆ ಬಿದ್ದ ರೂಪದರ್ಶಿ ಮೇಲೆ 16 ಬಾರಿ ಅತ್ಯಾಚಾರ! ಬೆಚ್ಚಿಬೀಳಿಸುತ್ತೆ ಪ್ರಿಯಕರನ ಮತ್ತೊಂದು ಮುಖ

crime
Published on

ಬೆಂಗಳೂರು: ರೂಪದರ್ಶಿ ಮೇಲೆ ಪ್ರಿಯಕರನಿಂದಲೇ ಅತ್ಯಾಚಾರ ನಡೆದಿದ್ದು, ಖಾಸಗಿ ವಿಡಿಯೋ ಇಟ್ಟುಕೊಂಡ ಪ್ರಿಯಕರ ಬ್ಲ್ಯಾಕ್​ಮೇಲ್​ ಮಾಡುತ್ತಾ ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ನಗರದಲ್ಲಿ ವಾಸವಿರುವ ಯುವತಿಯೊಬ್ಬಳು ಮಾಡೆಲ್​ನಲ್ಲಿ ಗುರುತಿಸಿಕೊಂಡಿದ್ದಾಳೆ. ಈಕೆಗೆ ಕಳೆದ ವರ್ಷ ಫೇಸ್​ಬುಕ್​ನಲ್ಲಿ ಪ್ರಮೋದ್​ ಎಂಬ ಯುವಕನ ಪರಿಚಯವಾಗಿದ್ದು, ಸ್ನೇಹ ಬೆಳೆದಿದೆ. ಕೊನೆಗೆ ಪ್ರೀತಿಯ ಬಲೆಗೆ ಬೀಳಿಸಿಕೊಂಡು ಮದುವೆ ಆಗುವುದಾಗಿ ಹೇಳಿದ್ದ. ಆಕೆಯೂ ಆತನನ್ನ ನಂಬಿದ್ದಳು. ಮದುವೆ ಆಗಲು ನಿರ್ಧರಿಸಿದ್ದಳು. ಈ ನಡುವೆ ಜ್ಯೂಸ್​ನಲ್ಲಿ ಮತ್ತು ಬರುವ ಮಾತ್ರೆ ಬೆರೆಸಿ ತನ್ನ ಪ್ರೇಯಸಿಗೆ ಕುಸಿಡಿದ ಪ್ರಮೋದ್​, ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಖಾಸಗಿ ವಿಡಿಯೋ ಸೆರೆ ಹಿಡಿದು ಆಕೆಯನ್ನ ಬೆದರಿಸಿದ್ದಲ್ಲದೆ, ಆತನ ಗೆಳೆಯ ಧನಂಜಯನನ್ನೂ ಕರೆತಂದು ಪ್ರಿಯತಮೆ ಮೇಲೆ ಅತ್ಯಾಚಾರವೆಸಗಿದ್ದಾನೆ.

ಪ್ರಿಯತಮೆಯ ಖಾಸಗಿ ವಿಡಿಯೋ ಮತ್ತು ಫೋಟೋ ಇಟ್ಟುಕೊಂಡ ಪ್ರಮೋದ್​, ನಾನು ಕರೆದಾಗಲೆಲ್ಲ ನೀನು ಬರಬೇಕು. ಇಲ್ಲವಾದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನಿನ್ನ ಖಾಸಗಿ ವಿಡಿಯೋ ವೈರಲ್ ಮಾಡ್ತೀನಿ. ನಿನ್ನ ತಂದೆ-ತಾಯಿಗೆ ತೋರಿಸ್ತೀನಿ ಎಂದು ಬೆದರಿಕೆ ಹಾಕಿ 16 ಬಾರಿ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net