More

    ಸಿಎಸ್​ಕೆ ಸೋತಿದ್ದಕ್ಕೆ ಕಣ್ಣೀರಿಟ್ಟಿದ್ದ ಅಂಬಟಿ ರಾಯುಡು ಆರ್​ಸಿಬಿ ಬಗ್ಗೆ ಕೊಟ್ರು ಅಚ್ಚರಿಯ ಹೇಳಿಕೆ!

    ನವದೆಹಲಿ: ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಪಂದ್ಯಾವಳಿಯ ಆರಂಭದಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಆರ್​ಸಿಬಿ, ಸತತ ಆರು ಗೆಲುವುಗಳೊಂದಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿತು. ಮೊದಲ 8 ಪಂದ್ಯಗಳಲ್ಲಿ ಆರ್​ಸಿಬಿ 7 ಪಂದ್ಯಗಳಲ್ಲಿ ಸೋತಿತ್ತು. ಅದರ ನಂತರ, ಅವರು ಅದ್ಭುತವಾಗಿ ಚೇತರಿಸಿಕೊಂಡರು ಮತ್ತು ನಾಲ್ಕನೇ ಸ್ಥಾನದೊಂದಿಗೆ ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಿದರು.

    ಇಂದು (ಮೇ 22) ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂದು ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಆರ್‌ಸಿಬಿಗೆ ಹೆಚ್ಚಿನ ಬೆಂಬಲ ಸಿಗುತ್ತಿದೆ. ಇದರ ನಡುವೆ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ.

    ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ (ಮೇ 22) ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಲಿದೆ ಎಂದು ರಾಯುಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲಿಮಿನೇಟರ್‌ನಲ್ಲಿ ಗೆದ್ದ ನಂತರ ಆರ್‌ಸಿಬಿ ಕ್ವಾಲಿಫೈಯರ್-2ಗೆ ಹೋಗಲಿದೆ ಎಂದು ಹೇಳಿದ್ದಾರೆ. ಆರ್‌ಸಿಬಿ ಆಡುತ್ತಿರುವ ರೀತಿ ಅದ್ಭುತವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್‌ನಂತಹ ಬಲಿಷ್ಠ ತಂಡದ ವಿರುದ್ಧ ಆರ್‌ಸಿಬಿ ಆಡಿದ ರೀತಿ ಅಚ್ಚರಿಗೆ ದೂಡಿತು ಎಂದರು.

    ಆರ್​ಸಿಬಿ ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರನಿಗೂ ತನ್ನ ಪಾತ್ರದ ಬಗ್ಗೆ ಸ್ಪಷ್ಟ ಅರಿವಿದೆ ಮತ್ತು ಅದಕ್ಕಾಗಿಯೇ ಆರ್​ಸಿಬಿ ಕ್ವಾಲಿಫೈಯರ್ -2ಗೆ ಹೋಗುತ್ತದೆ ಎಂದು ನಂಬುತ್ತೇನೆ ಎಂದು ರಾಯುಡು ಬಹಿರಂಗಪಡಿಸಿದರು. ಮತ್ತೊಂದೆಡೆ, ರಾಜಸ್ಥಾನ ರಾಯಲ್ಸ್‌ನ ಕೊನೆಯ ಲೀಗ್ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಇದು ತಂಡಕ್ಕೆ ಪಾಸಿಟಿವ್ ಅಥವಾ ನೆಗೆಟಿವ್​ ಆಗಿ ಪರಿಣಮಿಸುವುದೋ ಗೊತ್ತಿಲ್ಲ ಎಂದ ರಾಯುಡು, ತಂಡ ಕೊಂಚ ದುರ್ಬಲವಾಗಿ ಕಾಣುತ್ತಿದೆ ಎಂದು ಹೇಳಿದರು.

    ಈ ಸೀಸನ್​ನ ಆರಂಭದಲ್ಲಿ ರಾಜಸ್ಥಾನ ಅದ್ಭುತವಾಗಿ ಆಡಿದೆ. ಸತತ ಗೆಲುವಿನೊಂದಿಗೆ ಹಲವು ದಿನಗಳ ಕಾಲ ಟೇಬಲ್ ಟಾಪರ್ ಆಗಿ ನಿಂತಿತ್ತು. ಆದರೆ, ಅದೇ ತಂಡ ಪ್ಲೇ ಆಫ್‌ ಸಮೀಪಿಸುತ್ತಿರುವಾಗಲೇ ಸತತ ಸೋಲುಗಳನ್ನು ಅನುಭವಿಸಿತು. ಮೇಲಾಗಿ ಸ್ಟಾರ್ ಓಪನರ್ ಜಾಸ್ ಬಟ್ಲರ್ ಮನೆಗೆ ತೆರಳಿದ್ದು, ಮತ್ತೋರ್ವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲು ಸಾಧ್ಯವಾಗದೇ ಇರುವುದರಿಂದ ಆರ್​ಆರ್​ ತಂಡ ಬ್ಯಾಟಿಂಗ್​ನಲ್ಲಿ ನಾಯಕ ಸಂಜು ಸ್ಯಾಮ್ಸನ್ ಹಾಗೂ ರಿಯಾನ್ ಪರಾಗ್ ಅವರ ಮೇಲೆ ಅವಲಂಬಿತವಾಗಿದೆ.

    ಇನ್ನು ಬೌಲಿಂಗ್​ನಲ್ಲಿ ಟ್ರೆಂಟ್ ಬೌಲ್ಟ್, ಚಾಹಲ್ ಮತ್ತು ಅವೇಶ್ ಖಾನ್ ಮಾತ್ರ ಮಿಂಚುತ್ತಿದ್ದಾರೆ. ಆದರೆ ಎಲ್ಲಾ ವಿಭಾಗಗಳಲ್ಲಿ ಆರ್‌ಸಿಬಿ ಬಲಿಷ್ಠವಾಗಿದೆ. ಮತ್ತು ಎಲಿಮಿನೇಟರ್ ಗೆಲ್ಲುವ ಮೂಲಕ, RCB ಕ್ವಾಲಿಫೈಯರ್-2 ಗೆ ಅರ್ಹತೆ ಪಡೆಯುತ್ತದೆ ಎಂದು ರಾಯುಡು ಅವರು ಹೇಳಿದ್ದು, ಈ ಹೇಳಿಕೆ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

    1 ವಾರಕ್ಕೂ ಮುಂಚೆಯೇ ಮ್ಯಾಚ್​ ರಿಸಲ್ಟ್​ ಪ್ರಕಟ: ಆರ್​ಸಿಬಿ ಗೆಲುವು ಮೊದಲೇ ಫಿಕ್ಸ್​ ಆಗಿತ್ತಂತೆ​!

    IPL 2024: ಯಾವ ತಂಡಕ್ಕೆ ಕಪ್​ ಗೆಲ್ಲುವ ಅವಕಾಶ ಜಾಸ್ತಿ ಇದೆ? ಆರ್​ಸಿಬಿ ಫ್ಯಾನ್ಸ್​ಗೆ ಗುಡ್​ ನ್ಯೂಸ್​!

    RCBಗೆ ಬೆಂಬಲ ನೀಡಲು ಬರ್ತಿದ್ದಾರೆ ವಿಶೇಷ ಅತಿಥಿ! ಅವರಿದ್ರೆ ಕೊಹ್ಲಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts