More

    IPL 2024: ಫೈನಲ್​ ಪ್ರವೇಶಿಸುವ ಎರಡು ತಂಡಗಳನ್ನು ಹೆಸರಿಸಿದ ಎಬಿ ಡಿವಿಲಿಯರ್ಸ್​!

    ನವದೆಹಲಿ: ಪ್ರಸಕ್ತ ಐಪಿಎಲ್-2024 ಟೂರ್ನಿ ನಿರ್ಣಾಯಕ ಹಂತವನ್ನು ತಲುಪಿದೆ. ಇಂದಿನಿಂದ (ಮೇ 21) ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿವೆ. ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್​), ಸನ್‌ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​), ರಾಜಸ್ಥಾನ ರಾಯಲ್ಸ್ (ಆರ್​ಆರ್​), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಅಂಕಪಟ್ಟಿಯಲ್ಲಿ ಅಗ್ರ 4 ಸ್ಥಾನದಲ್ಲಿರುವ ತಂಡಗಳಾಗಿದ್ದು, ಈ ಪ್ಲೇ ಆಫ್‌ನಲ್ಲಿ ಮುಖಾಮುಖಿಯಾಗಲಿವೆ. ಒಟ್ಟು ಮೂರು ಪಂದ್ಯಗಳು ನಡೆಯಲಿವೆ. ಕ್ವಾಲಿಫೈಯರ್ ಒಂದು, ಎಲಿಮಿನೇಟರ್, ಕ್ವಾಲಿಫೈಯರ್ ಎರಡು… ಈ ಮೂರು ಪಂದ್ಯಗಳ ನಂತರ ಎರಡು ತಂಡಗಳು ಟ್ರೋಫಿಗಾಗಿ ಪರಸ್ಪರ ಮುಖಾಮುಖಿಯಾಗಲಿವೆ.

    ಕೆಕೆಆರ್​ ಮತ್ತು ಎಸ್​ಆರ್​ಎಚ್​ ಅಗ್ರ ಎರಡು ತಂಡಗಳು ಕ್ವಾಲಿಫೈಯರ್ 1ರಲ್ಲಿ ಸ್ಪರ್ಧಿಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ತಲುಪಲಿದೆ. ಸೋತ ತಂಡವು ಎಲಿಮಿನೇಟರ್‌ನಲ್ಲಿ ವಿಜೇತ ತಂಡದ ವಿರುದ್ಧ ಕ್ವಾಲಿಫೈಯರ್ ಎರಡರಲ್ಲಿ ಆಡಲಿದೆ. ಎಲಿಮಿನೇಟರ್‌ನಲ್ಲಿ ಆರ್​ಆರ್​ ಮತ್ತು ಆರ್​ಸಿಬಿ ತಂಡಗಳು ಮುಖಾಮುಖಿಯಾಗಲಿವೆ. ಸೋತ ತಂಡ ಮನೆಗೆ ಹೋದರೆ, ಗೆದ್ದ ತಂಡ ಕ್ವಾಲಿಫೈಯರ್ ಎರಡರಲ್ಲಿ ಆಡುತ್ತದೆ. ಫೈನಲ್​ನಲ್ಲಿ ಯಾವ ಎರಡು ತಂಡಗಳು ಟ್ರೋಫಿಗಾಗಿ ಕಾದಾಡಲಿವೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇದೀಗ ದಕ್ಷಿಣ ಆಫ್ರಿಕಾದ ಕ್ರಿಕೆಟ್​ ದಿಗ್ಗಜ ಹಾಗೂ ಆರ್​ಸಿಬಿ ಮಾಜಿ ಆಟಗಾರ ಎ.ಬಿ. ಡಿವಿಲಿಯರ್ಸ್​ ಭವಿಷ್ಯ ನುಡಿದಿದ್ದಾರೆ.

    ಪ್ರಸಕ್ತ ಐಪಿಎಲ್​ನಲ್ಲಿ ಆರ್​ಸಿಬಿ ಫೈನಲ್ ತಲುಪುವುದು ಖಚಿತ ಎಂದು ಎಬಿಡಿ ಹೇಳಿದ್ದಾರೆ. ಬೆಂಗಳೂರು ಜತೆಗೆ ಗ್ರೂಪ್ ಹಂತದಲ್ಲಿ ಅಗ್ರಸ್ಥಾನಿಯಾಗಿದ್ದ ಕೋಲ್ಕತ್ತ ತಂಡವೂ ಫೈನಲ್‌ಗೆ ಅರ್ಹತೆ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಪ್ರಶಸ್ತಿ ಹೋರಾಟದಲ್ಲಿ ಆರ್​ಸಿಬಿ-ಕೆಕೆಆರ್ ಮುಖಾಮುಖಿಯಾಗಲಿದ್ದು, ಎರಡು ತಂಡಗಳಲ್ಲಿ ಒಂದು ಚಾಂಪಿಯನ್ ಆಗಿ ಹೊರಹೊಮ್ಮಲಿದೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ಎಸ್​ಆರ್​ಎಚ್​ ಮತ್ತು ಆರ್​ಆರ್​ಗೆ ಯಾವುದೇ ಅವಕಾಶವಿಲ್ಲ ಎಂದು ಎಬಿಡಿ ಸ್ಪಷ್ಟಪಡಿಸಿದ್ದಾರೆ. ಆರ್‌ಸಿಬಿ ತಂಡ ಸತತ 6 ಪಂದ್ಯಗಳನ್ನು ಗೆದ್ದು ಅಬ್ಬರಿಸಿದೆ. ಈ ಸೀಸನ್​ನಲ್ಲಿ ಕೆಕೆಆರ್ ಅತ್ಯುತ್ತಮ ತಂಡವಾಗಿದೆ. ಹೀಗಾಗಿ ಈ ಎರಡು ತಂಡಗಳ ನಡುವೆ ಫೈನಲ್ ಫೈಟ್ ನಡೆಯುವ ಸಾಧ್ಯತೆ ಇದೆ ಎಂದು ಎಬಿಡಿ ಹೇಳಿದ್ದಾರೆ.

    ಈ ಸೀಸನ್​ನಲ್ಲಿ ಫೈನಲ್ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಸ್ಟೇಡಿಯಂ ವೇದಿಕೆಯಾಗಲಿದೆ. ಒಂದು ವೇಳೆ ಕೋಲ್ಕತ್ತ ಫೈನಲ್ ತಲುಪಿದರೆ ಚೆಪಾಕ್ ಪಿಚ್​ನಿಂದ ಹೆಚ್ಚಿನ ಬೆಂಬಲ ಸಿಗುವ ಸಾಧ್ಯತೆ ಇದೆ ಎಂದು ಎಬಿಡಿ ಹೇಳಿದ್ದಾರೆ. ಚೆಪಾಕ್ ಪಿಚ್ ಸ್ವಾಭಾವಿಕವಾಗಿ ಸ್ಪಿನ್‌ಗೆ ಹೇಳಿ ಮಾಡಿಸಿದಂತಿದೆ. ಈ ಹಿನ್ನಲೆಯಲ್ಲಿ ವರುಣ್ ಚಕ್ರವರ್ತಿ ಹಾಗೂ ಸುನಿಲ್ ನರೈನ್​ರಂತಹ ವಿಶ್ವ ದರ್ಜೆಯ ಸ್ಪಿನ್ನರ್‌ಗಳನ್ನು ಹೊಂದಿರುವ ಕೋಲ್ಕತ್ತಗೆ ಈ ಮೈದಾನ ಹೆಚ್ಚು ಅನುಕೂಲಕರವಾಗುವ ಸಾಧ್ಯತೆಗಳಿವೆ ಎಂದು ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.

    ಮತ್ತೊಂದೆಡೆ ಸನ್‌ರೈಸರ್ಸ್ ಅಭಿಮಾನಿಗಳು ಎಬಿಡಿ ಹೇಳಿಕೆಗೆ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಎಸ್​ಆರ್​ಎಚ್ ತಂಡ ಕೆಕೆಆರ್​ಗೆ ಶಾಕ್ ನೀಡುವುದು ಖಚಿತ. ಫೈನಲ್​ನಲ್ಲಿ ಕಣಕ್ಕಿಳಿಯೋಣ ಎಂದು ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್​)

    IPL 2024: ಯಾವ ತಂಡಕ್ಕೆ ಕಪ್​ ಗೆಲ್ಲುವ ಅವಕಾಶ ಜಾಸ್ತಿ ಇದೆ? ಆರ್​ಸಿಬಿ ಫ್ಯಾನ್ಸ್​ಗೆ ಗುಡ್​ ನ್ಯೂಸ್​!

    RCBಗೆ ಬೆಂಬಲ ನೀಡಲು ಬರ್ತಿದ್ದಾರೆ ವಿಶೇಷ ಅತಿಥಿ! ಅವರಿದ್ರೆ ಕೊಹ್ಲಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts