ಸಹಕಾರ ರಂಗದ ವೃತ್ತಿ ಸವಾಲಿನದು

hhr sahakara
ಹೊಳೆಹೊನ್ನೂರು ಸಮೀಪದ ಆಗರದಹಳ್ಳಿಯಲ್ಲಿ ಜಿಲ್ಲಾ ಉತ್ತಮ ಸಹಕಾರ ಪ್ರಶಸ್ತಿ ಪುರಸ್ಕೃತ ಎಚ್.ಎಂ.ಸಿದ್ದಪ್ಪ ಗೌಡ ದಂಪತಿಗಳನ್ನು ಅಭಿನಂದಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಹನುಮಂತು, ನಾಗರಾಜ್ ಇತರರಿದ್ದರು.
Published on

ಹೊಳೆಹೊನ್ನೂರು: ಹತ್ತಾರು ವರ್ಷಗಳ ಹಿಂದೆ ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳಿಲ್ಲದೆ ಸಹಕಾರ ಸಂಘಗಳನ್ನು ನಡೆಸಿ ಪೋಷಿಸುವುದು ಸುಲಭವಾಗಿರಲಿಲ್ಲ ಎಂದು ಜಿಲ್ಲಾ ಸಹಕಾರಿ ಪ್ರಶಸ್ತಿ ಪುರಸ್ಕೃತ ಎಚ್.ಎಂ.ಸಿದ್ದಪ್ಪ ಗೌಡ ಹೇಳಿದರು.

ಆಗರದಹಳ್ಳಿ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಹಕಾರ ರಂಗದ ವೃತ್ತಿಗಳಲ್ಲಿ ಕಳಂಕ ರಹಿತವಾಗಿ ನೌಕರಿ ಮಾಡುವುದು ನಿಜಕ್ಕೂ ಸಾವಾಲಿನ ಕೆಲಸ ಎಂದರು.

ಅನ್ನದಾತರು ಬಡ್ಡಿ ರಿಯಾಯಿತಿ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಭ್ರಷ್ಟಾಚಾರ ತಲೆದೋರಿದರೆ ಸಹಕಾರ ಕ್ಷೇತ್ರ ಹಾಳಾಗುವುದರಲ್ಲಿ ಎರಡು ಮಾತಿಲ್ಲ. ಪಡೆದ ಸಾಲ ಉದೇಶಕ್ಕಾಗಿ ಸದ್ಬಳಕೆ ಆಗಬೇಕು. ಸಹಕಾರಿ ಕ್ಷೇತ್ರದಲ್ಲಿ ದಾಖಲೆಗಳನ್ನು ನಿಯಮಿತವಾಗಿ ಸಂಗ್ರಹಿಸಬೇಕು. ಗ್ರಾಮಗಳಿಗೆ ಸೊಸೈಟಿಗಳು ಆನೆ ಬಲ ನೀಡುತ್ತವೆ. ಆದಷ್ಟು ಸ್ವಂತ ನಿವೇಶನಗಳಲ್ಲಿ ಸಂಘಗಳು ನಡೆಯುವಂತಾಗಬೇಕು. ಮಹಿಳೆಯರ ಸಹಕಾರವನ್ನು ಮರೆಯುವಂತಿಲ್ಲ. ರೈತಾಪಿಗಳು ಉಪಕಾರ ಮಾಡಿದವರನ್ನು ಎಂದಿಗೂ ಮರೆಯುವುದಿಲ್ಲ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಹನುಮಂತಪ್ಪ ಮಾತನಾಡಿ, ಗ್ರಾಮದ ಉದ್ಧಾರಕ್ಕೆ ಸಹಕರಿಸಿದವರನ್ನು ಮರೆಯುವ ಮಾತಿಲ್ಲ. ಸಹಕಾರ ಕ್ಷೇತ್ರದ ಲಾಭಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಹಳ್ಳಿಗಳಲ್ಲಿನ ಸಣ್ಣ ಪುಟ್ಟ ಸಂಘಗಳು ಏಳಿಗೆಯಾಗಬೇಕು. ಸ್ಥಳೀಯ ಸಂಘ ಸಂಸ್ಥೆಗಳಿಗೆ ಆರ್ಥಿಕ ಬಲ ನೀಡಲು ಶ್ರಮಿಸಲಾಗುತ್ತಿದೆ. ರೈತರು ಆದಷ್ಟು ಸಹಕಾರ ಸಂಘಗಳಲ್ಲಿ ವ್ಯವಹರಿಸಬೇಕು ಎಂದರು.

ಸಂಘದ ಅಧ್ಯಕ್ಷ ಹನುಮಂತು, ಉಪಾಧ್ಯಕ್ಷ ರುದ್ರೇಶಪ್ಪ, ನಿವೃತ್ತ ಶಿಕ್ಷಕ ಈಶ್ವರಪ್ಪ, ಎಚ್.ಎನ್.ನಾಗರಾಜ್, ರವಿಕುಮಾರ್, ನಾಗರಾಜ ಗೌಡ, ಚಿನ್ನಯ್ಯ, ಶಿವಕುಮಾರ್, ವೀಣಾ, ಹಂಚಿನಸಿದ್ದಾಪುರ ರುದ್ರೇಶ್, ಬಸವರಾಜ್, ರಮೇಶ್, ಅನಂತರಾವ್, ಮುಖ್ಯಾ ಕಾರ್ಯನಿರ್ವಣಾಧಿಕಾರಿ ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net