ಶುಂಠಿ ಗದ್ದೆಯಲ್ಲಿ ಬೆಳೆದಿದ್ದ ಗಾಂಜಾ ಗಿಡ ವಶ

ಶುಂಠಿ ಗದ್ದೆಯಲ್ಲಿ ಬೆಳೆದಿದ್ದ ಗಾಂಜಾ ಗಿಡ ವಶ
Published on

ಹುಣಸೂರು: ತಾಲೂಕಿನ ಹನಗೋಡು ಹೋಬಳಿ ದೊಡ್ಡಹೆಜ್ಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಂಠಿ ಜಮೀನಿನ ನಡುವೆ ಬೆಳೆದಿದ್ದ ಗಾಂಜಾ ಗಿಡವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿಯನ್ನಾಧರಿಸಿ ಡಿವೈಎಸ್‌ಪಿ ಕೆ.ಟಿ.ವಿಜಯಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದರು. ಗ್ರಾ.ಪಂ. ವ್ಯಾಪ್ತಿಯ ಕೋಣನಹೊಸಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಮುಂಭಾಗದ ಸರ್ವೇ ನಂ 22ರಲ್ಲಿ ಸುಮಾರು 5 ಅಡಿ ಎತ್ತರದ, 6 ಇಂಚು ಗಾತ್ರದ 2.190 ಕೆಜಿ ತೂಕದ ಗಾಂಜಾ ಗಿಡವನ್ನು ಪತ್ತೆ ಹೆಚ್ಚಿ ಜಪ್ತಿ ಮಾಡಿಕೊಂಡರು.

ಶುಂಠಿ ಜಮೀನಿನಲ್ಲಿ ಅತ್ಯಂತ ಜಾಣ್ಮೆಯಿಂದ ಗಾಂಜಾ ಗಿಡ ಬೆಳೆದು ಗಿಡ ಕಾಣದಂತೆ ಸಾಕಷ್ಟು ಕಸರತ್ತು ನಡೆಸಿದ್ದನು. ಜಮೀನಿನ ಮಾಲೀಕ ಪರಾರಿಯಾಗಿದ್ದು, ಪತ್ತೆ ಕಾರ್ಯಕ್ಕೆ ಕ್ರಮವಹಿಸಲಾಗಿದೆ ಎಂದು ಅಬಕಾರಿ ಇನ್ಸ್‌ಪೆಕ್ಟರ್ ನಾಗಲಿಂಗಸ್ವಾಮಿ ತಿಳಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net